ಬ್ರಹ್ಮಾವರ: ಜಗದ್ಗುರು ಶಂಕರಾಚಾರ್ಯರ ತತ್ವಗಳು ನಮ್ಮ ಜೀವನಕ್ಕೆ ದಾರಿದೀಪ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲ್ಲೂಕು ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಸವಿತಾ ಎರ್ಮಾಳ್ ಹೇಳಿದರು.
ತಾಲ್ಲೂಕು ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾದ ವತಿಯಿಂದ ನಡೆದ ಶಂಕರ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ಶಂಭುಶಂಕರ ರಾವ್ ಉದ್ಘಾಟಿಸಿದರು.
ಬ್ರಾಹ್ಮಣ ಮಹಾಸಭಾ ವಲಯ ಅಧ್ಯಕ್ಷ ಡಾ.ವೈ. ರವೀಂದ್ರನಾಥ ರಾವ್, ಸಂಚಾಲಕ ಉದಯ ಬಿ, ಖಜಾಂಚಿ ನೀಲಕಂಠ ರಾವ್, ಜತೆ ಕಾರ್ಯದರ್ಶಿ ರವೀಂದ್ರ ರಾವ್, ಯುವ ವೇದಿಕೆ ಅಧ್ಯಕ್ಷ ರಾಮಚಂದ್ರ ರಾವ್, ಶ್ಯಾಮಣ್ಣ ಬ್ರಹ್ಮಾವರ , ಗೌರಿ ಸೋಮೇಶ ರಾವ್, ರಾಮಚಂದ್ರ ರಾವ್ ಮಸ್ಕಿಬೈಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.