ADVERTISEMENT

ಲಂಚ ಪ್ರಕರಣ: ಎಆರ್‌ಟಿಒಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 15:21 IST
Last Updated 19 ಮಾರ್ಚ್ 2019, 15:21 IST

ಉಡುಪಿ: ಲಂಚ ಸ್ವೀಕಾರ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಉಡುಪಿ ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್‌.ಎಂ.ವರ್ಣೇಕರ್ ಹಾಗೂ ಆಪ್ತ ಮುನಾಫ್‌ ಅವರಿಗೆ ಸೋಮವಾರ ಉಡುಪಿ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಅನುಮತಿ ಇಲ್ಲದೆ ವಿದೇಶಕ್ಕೆ ತೆರಳಬಾರದು, ತನಿಖೆಗೆ ಅಧಿಕಾರಿಗಳಿಗೆ ಸಹಕರಿಸಬೇಕು, ಸಾಕ್ಷ್ಯಗಳನ್ನು ನಾಶಮಾಡಬಾರದು ಹಾಗೂ ತಲಾ ಇಬ್ಬರಿಂದ ತಲಾ ₹ 5 ಲಕ್ಷದ ಬಾಂಡ್‌ ಪಡೆದು ಬಿಡುಗಡೆ ಮಾಡಿದೆ.

ಬೆಂಕಿಗಾಹುತಿಯಾದ ಕಾರಿನ ತೆರಿಗೆ ಮರುಪಾವತಿ ಸಂಬಂಧ ವಾಹನ ಮಾಲೀಕರಿಂದ ₹ 4000 ಲಂಚ ಪಡೆಯುತ್ತಿದ್ದಾಗ ಎಆರ್‌ಟಿಒ ವರ್ಣೇಕರ್ ಹಾಗೂ ಆಪ್ತ ಮುನಾಫ್‌ ಅವರನ್ನು ಎಸಿಬಿ ಅಧಿಕಾರಿಗಳು ಮಾರ್ಚ್‌ 16ರಂದು ಬಂಧಿಸಿದ್ದರು.

ADVERTISEMENT

ದಾಳಿ ವೇಳೆ ಎಆರ್‌ಟಿಒ ಅವರ ಮಂಗಳೂರಿನ ನಿವಾಸದಲ್ಲಿ ₹ 70 ಲಕ್ಷ ನಗದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.