ADVERTISEMENT

ಪೊಲೀಸರು–ಸಾರ್ವಜನಿಕರ ಮಧ್ಯೆ ವಾಗ್ವಾದ

ಪೊಲೀಸ್ ಸಮವಸ್ತ್ರ ಧರಿಸದೆ ವಾಹನ ತಪಾಸಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 14:30 IST
Last Updated 12 ಸೆಪ್ಟೆಂಬರ್ 2019, 14:30 IST

ಉಡುಪಿ: ಪಿಪಿಸಿ ಕಾಲೇಜು ಬಳಿ ಗುರುವಾರ ಸಂಚಾರ ಠಾಣೆಯ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವಾಗ್ವಾದ ನಡೆದಿದೆ.

ಮಫ್ತಿಯಲ್ಲಿದ್ದ ಪೊಲೀಸರು ವಾಹನಗಳ ತಪಾಸಣೆಗಿಳಿದು ದಂಡ ವಸೂಲಿಗೆ ಇಳಿದಾಗ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಮವಸ್ತ್ರದಲ್ಲಿ ಇಲ್ಲದವರು ಹಾಗೂ ಮೇಲಧಿಕಾರಿಗಳಲ್ಲದವರು ದಂಡ ವಸೂಲಿ ಮಾಡುವಂತಿಲ್ಲ ಎಂದು ಪೊಲೀಸರ ಜತೆ ವಾಗ್ವಾದ ನಡೆಸಿದರು. ಬಳಿಕ ಪೊಲೀಸ್‌ ಜೀಪಿಗೆ ಅಡ್ಡಲಾಗಿ ಘೇರಾವ್ ಹಾಕಿದರು. ಈ ಸಂದರ್ಭ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸಂಚಾರ ನಿಯಮಗಳ ಉಲ್ಲಂಘನೆಗೆ ವಿಪರೀತ ದಂಡ ವಿಧಿಸುತ್ತಿರುವ ಕ್ರಮ ಸರಿಯಲ್ಲ. ಸಾರ್ವಜನಿಕರನ್ನು ಸುಲಿಗೆ ಮಾಡುವುದು ಖಂಡನೀಯ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ

ಉಡುಪಿ: ಮಣಿಪಾಲ ಸಮೀಪದ ಮಂಚಿಕೋಡಿ ಬಳಿ ಗುರುವಾರ ಬೆಳಿಗ್ಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬರ ಸರವನ್ನು ಕಿತ್ತು ಪರಾರಿಯಾಗಿದ್ದಾನೆ.

ಬೆಳಿಗ್ಗೆ ಮಣಿಪಾಲ ಪ್ರೆಸ್‌ಗೆ ಕೆಲಸಕ್ಕೆ ಹೋಗುವಾಗ ಎದುರಿಗೆ ಬಂದ ಸರಗಳ್ಳ ಮಹಿಳೆಯನ್ನು ಸಮೀಪದ ಗದ್ದೆಗೆ ದೂಡಿ ಸರವನ್ನು ಕೀಳಲು ಮುಂದಾಗಿದ್ದಾನೆ. ಮಹಿಳೆ ಪ್ರತಿರೋಧ ತೋರಿದಾಗ ಸರ ತುಂಡಾಗಿದ್ದು, ಅರ್ಧ ಸರವನ್ನು ಕಿತ್ತು ಪರಾರಿಯಾಗಿದ್ದಾನೆ.

ಸರಗಳ್ಳತನ ಮಾಡಿದ ವ್ಯಕ್ತಿ ಮಹಿಳೆಯ ಊರಿನವನಾಗಿದ್ದು, ಪ್ರವೀಣ್ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.