ADVERTISEMENT

ನಾಲ್ಕು ದಿನಗಳಲ್ಲಿ 17 ಸೋಂಕಿತರು ಸಾವು

ಉಡುಪಿ: 977 ಮಂದಿಯಲ್ಲಿ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 7 ಮೇ 2021, 16:22 IST
Last Updated 7 ಮೇ 2021, 16:22 IST

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿರ ಸರಣಿ ಮುಂದುವರಿದಿದೆ. ಕಳೆದ ನಾಲ್ಕು ದಿನಗಳಲ್ಲಿ 17 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.

ಶುಕ್ರವಾರವೂ 6 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಉಡುಪಿ ತಾಲ್ಲೂಕಿನ 64, 87, 60 ವರ್ಷದ ಮಹಿಳೆಯರು ಹಾಗೂ 58, 85 ವರ್ಷದ ಪುರುಷರು ಹಾಗೂ ಕಾರ್ಕಳ ತಾಲ್ಲೂಕಿನ 81 ವರ್ಷದ ವೃದ್ಧೆ ಮೃತಪಟ್ಟವರು. ಮೃತರೆಲ್ಲರೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದು, ಕೊರೊನಾ ಸೋಂಕು ತಗುಲಿ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ 6 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

977 ಮಂದಿಗೆ ಸೋಂಕು:

ADVERTISEMENT

ಶುಕ್ರವಾರ 977 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, ಉಡುಪಿಯ 383, ಕುಂದಾಪುರದ 280, ಕಾರ್ಕಳದ 310 ಹಾಗೂ ಇತರೆ ಜಿಲ್ಲೆಗಳ ನಾಲ್ವರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ 520 ಪುರುಷರು ಹಾಗೂ 457 ಮಹಿಳೆಯರು ಇದ್ದಾರೆ. 186 ಜನರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ, 791 ಮಂದಿಯಲ್ಲಿ ಲಕ್ಷಣಗಳು ಪತ್ತೆಯಾಗಿಲ್ಲ. 29 ಸೋಂಕಿತರು ಆಸ್ಪತ್ರೆಗಳಲ್ಲಿ ಹಾಗೂ 948 ಸೋಂಕಿತರು ಹೋಂಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2,653 ಮಂದಿಗೆ ನಡೆದ ಕೋವಿಡ್‌ಯಲ್ಲಿ 977 ಜನರಲ್ಲಿ ಸೋಂಕು ದೃಢಪಟ್ಟಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸೋಂಕು ಪತ್ತೆ ಪ್ರಮಾಣ ಗರಿಷ್ಠ ಮಟ್ಟ ಮುಟ್ಟಿದೆ.

ಎರಡನೇ ಡೋಸ್‌ ಮಾತ್ರ:

ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆಯ ಅಭಾವ ತಲೆದೋರಿದ್ದು, ಮೊದಲ ಡೋಸ್‌ ಲಸಿಕೆ ಹಾಕುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. 2ನೇ ಡೋಸ್ ಬಾಕಿ ಇದ್ದವರಿಗೆ ಮಾತ್ರ ಆದ್ಯತೆ ಮೇಲೆ ಹಾಕಲಾಗುತ್ತಿದೆ. ಬ್ರಹ್ಮಗಿರಿಯ ಸೇಂಟ್ ಸಿಸಿಲಿಸ್ ಶಾಲೆಯ ಆವರಣದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಮಾರ್ಚ್‌ 8ಕ್ಕಿಂತ ಮುಂಚಿತವಾಗಿ ಕೋವಿಶೀಲ್ಡ್ ಮೊದಲ ಡೋಸ್‌ ಪಡೆದವರು ಹಾಗೂ ಮಾರ್ಚ್‌ 21ಕ್ಕಿಂತ ಮುಂಚಿತವಾಗಿ ಕೋವ್ಯಾಕ್ಸಿನ್ ಲಸಿಕೆ ಪಡೆದವರು 2ನೇ ಡೋಸ್ ಪಡೆಯಬಹುದು ಎಂಡು ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.