ADVERTISEMENT

ಉಡುಪಿ: 50 ಮಂದಿಗೆ ಪಾಸಿಟಿವ್, ಒಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 15:47 IST
Last Updated 4 ನವೆಂಬರ್ 2020, 15:47 IST

ಉಡುಪಿ: ಜಿಲ್ಲೆಯಲ್ಲಿ ಬುಧವಾರ 50 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಉಡುಪಿಯ 45 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಉಡುಪಿಯ 30, ಕುಂದಾಪುರದ 7 ಹಾಗೂ ಕಾರ್ಕಳದ 13 ಮಂದಿಗೆ ಸೋಂಕು ತಗುಲಿದ್ದು, 27 ಪುರುಷರು, 23 ಮಹಿಳೆಯರು ಸೇರಿದ್ದಾರೆ. ಬುಧವಾರ 61 ಸೇರಿ ಇದುವರೆಗೂ 21,402 ಸೋಂಕಿತರು ಗುಣಮುಖರಾಗಿದ್ದಾರೆ. 451 ಸಕ್ರಿಯ ಸೋಂಕು ಪ್ರಕರಣಗಳಿವೆ.

ಒಟ್ಟು ಪ್ರಕರಣಗಳು 22,035 ಇದ್ದು, ಮೃತಪಟ್ಟ ಸೋಂಕಿತರ ಸಂಖ್ಯೆ 184ಕ್ಕೆ ಏರಿಕೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.