ADVERTISEMENT

ಗೋವಿನ ರುಂಡ ಪತ್ತೆ ಪ್ರಕರಣ: ಹೆಚ್ಚಿನ ತನಿಖೆಗೆ ಶರಣ್‌ ಪಂಪ್‌ವೆಲ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:49 IST
Last Updated 3 ಜುಲೈ 2025, 15:49 IST
<div class="paragraphs"><p>ಶರಣ್‌ ಪಂಪ್‌ವೆಲ್‌</p></div>

ಶರಣ್‌ ಪಂಪ್‌ವೆಲ್‌

   

ಉಡುಪಿ: ಬ್ರಹ್ಮಾವರದ ಕುಂಜಾಲು ಪರಿಸರದಲ್ಲಿ ಗೋವಿನ ರುಂಡ ಪತ್ತೆಯಾದ ಪ್ರಕರಣದ ಹಿಂದೆ ಗೋಕಳ್ಳತನ, ಅಕ್ರಮ ಗೋ ಸಾಗಣೆದಾರರ ಕೈವಾಡದ ಶಂಕೆ ಇದ್ದು, ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ದಂಧೆಕೋರರು ಕೃತ್ಯ ನಡೆಸಲು ಹಿಂದೂಗಳನ್ನು ಬಳಸಿಕೊಂಡಿರುವ ಶಂಕೆಯೂ ಇದೆ ಎಂದರು.

ADVERTISEMENT

ಹಿಂದೂಗಳು ಗೋಹತ್ಯೆ ಮಾಡಬಾರದು, ಈ ಕುರಿತು ವಿಶ್ವ ಹಿಂದೂ ಪರಿಷತ್‌ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ದಂಧೆಕೋರರು ಅತಿ ಹಿಂದುಳಿದ ವರ್ಗದವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಗೋವಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ದೇಶದಿಂದ ಗೋಮಾಂಸ ರಫ್ತಾಗುತ್ತಿರುವುದನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೂ ಆಗ್ರಹಿಸಲಾಗುವುದು ಎಂದರು.

ಪುತ್ತೂರಿನಲ್ಲಿ ಹಿಂದೂ ಹೆಣ್ಣು ಮಗಳಿಗೆ ಅನ್ಯಾಯವಾಗಿರುವ ಪ್ರಕರಣವು ಎರಡು ಕುಟುಂಬಗಳಿಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಅವರೇ ಅದನ್ನು ಪರಿಹರಿಸಿಕೊಳ್ಳಲಿ ಎಂಬ ಕಾರಣಕ್ಕೆ ನಾವು ಮಧ್ಯ ಪ್ರವೇಶಿಸಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸುನಿಲ್‌ ಕೆ.ಆರ್‌., ವಿಷ್ಣುಮೂರ್ತಿ ಆಚಾರ್ಯ, ದಿನೇಶ್‌ ಮೆಂಡನ್, ಮನೋಜ್‌ ಮಲ್ಪೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.