ಉಡುಪಿ: ಮಲ್ಪೆ ಬಸ್ ನಿಲ್ದಾಣದ ಹತ್ತಿರ ಇರುವ ರಾಜ್ ಮಹಲ್ ಬಿಲ್ಡಿಂಗ್ನಲ್ಲಿರುವ ಕರಾವಳಿ ಮೊಬೈಲ್ಸ್ ಅಂಗಡಿಯ ಬಾಗಿಲು ಮುರಿದು ಶನಿವಾರ ಕಳವು ನಡೆಸಲಾಗಿದೆ.
7 ಮೊಬೈಲ್, ಹೆಡ್ ಪೋನ್, ಬ್ಲೂಟೂತ್ ನೆಕ್ ಬ್ಯಾಂಡ್, ಹಾಗೂ ₹ 10,000 ದೋಚಲಾಗಿದೆ. ಕಳವಾದ ವಸ್ತುವಿನ ಮೌಲ್ಯ ₹ 1 ಲಕ್ಷ ಎಂದು ಅಂದಾಜಿಸಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.