ADVERTISEMENT

ಉಚ್ಚಿಲ ದಸರಾ ಉತ್ಸವಕ್ಕೆ ಚಾಲನೆ

ನವದುರ್ಗೆಯರ, ಶಾರದಾ ಮಾತೆಯ ವಿಗ್ರಹಗಳ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 4:31 IST
Last Updated 27 ಸೆಪ್ಟೆಂಬರ್ 2022, 4:31 IST
ಉಚ್ಚಿಲ ದಸರಾ ಉತ್ಸವಕ್ಕೆ ಸೋಮವಾರ ಉಡುಪಿ ಅಜ್ಜರ ಕಾಡು ಸರ್ಕಾರಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಶ್ರೀತೇಜ ಕೂರ್ಮಾರಾವ್ ದೀಪ ಬೆಳಗಿಸಿ ಸೋಮವಾರ ಚಾಲನೆ ನೀಡಿದರು.
ಉಚ್ಚಿಲ ದಸರಾ ಉತ್ಸವಕ್ಕೆ ಸೋಮವಾರ ಉಡುಪಿ ಅಜ್ಜರ ಕಾಡು ಸರ್ಕಾರಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಶ್ರೀತೇಜ ಕೂರ್ಮಾರಾವ್ ದೀಪ ಬೆಳಗಿಸಿ ಸೋಮವಾರ ಚಾಲನೆ ನೀಡಿದರು.   

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಡಳಿತದ ಉಚ್ಚಿಲ ಮಹಾಲಕ್ಷ್ಮೀ ದೇವಳದಲ್ಲಿ ನವರಾತ್ರಿಯ ಪ್ರಯುಕ್ತ ನಡೆಯುವ ಮೊದಲ ವರ್ಷದ ‘ಉಚ್ಚಿಲ ದಸರಾ ಉತ್ಸವ-2022’ಕ್ಕೆ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಶ್ರೀತೇಜ ಕೂರ್ಮಾರಾವ್ ದೀಪ ಬೆಳಗಿಸಿ ಸೋಮವಾರ ಚಾಲನೆ ನೀಡಿದರು. ಅ.5 ರವರೆಗೆ ನವರಾತ್ರಿ ಉತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ದೇವಸ್ಥಾನದ ಸಮೀಪದಲ್ಲಿ ನೂತನವಾಗಿ ನಿರ್ಮಾಣವಾದ ಸುಸಜ್ಜಿತ ‘ಶ್ರೀಮತಿ ಶಾಲಿನಿ ಡಾ.ನಾಡೋಜ ಜಿ. ಶಂಕರ್’ ತೆರೆದ ಸಭಾಂಗಣದಲ್ಲಿ ನವದುರ್ಗೆಯರ ಮತ್ತು ಶಾರದಾ ಮಾತೆಯ ವಿಗ್ರಹಗಳ ಪ್ರತಿಷ್ಠಾಪನೆಯೊಂದಿಗೆ ಉತ್ಸವ ಆರಂಭಗೊಂಡಿತು. ಸಭಾಂಗಣವನ್ನು ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್ ಉದ್ಘಾಟಿಸಿದರು.

ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾರ, ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ವಿಷ್ಣು ಮೂರ್ತಿ ಉಪಾಧ್ಯಾಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ADVERTISEMENT

ಕಾಪು ಶಾಸಕ ಲಾಲಾಜಿ ಮೆಂಡನ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಸುಭಾಸ್‌ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್, ಕೋಶಾಧಿಕಾರಿ ಭರತ್ ಕುಮಾರ್ ಎರ್ಮಾಳು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ.ಅಮೀನ್, ಕ್ಷೇತ್ರಾಧ್ಯಕ್ಷ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜತೆ ಕಾರ್ಯದರ್ಶಿ ಮೋಹನ್ ಬಿ. ಕರ್ಕೇರ, ಶ್ರಿಪತಿ ಭಟ್, ಕಾಪು ಪೊಲೀಸ್ ಸರ್ಕಲ್‌ ಇನ್‌ಸ್ಪೆಕ್ಟರ್ ಕೆ.ಸಿ. ಪೂವಯ್ಯ, ಸತೀಶ್ ಅಮೀನ್ ಮಟ್ಟು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.