ADVERTISEMENT

ಕೋಟ: ಪ್ರಾಥಮಿಕ ಶಾಲೆಗೆ ಕಲಿಕೋಪಕರಣ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 13:52 IST
Last Updated 24 ಜೂನ್ 2025, 13:52 IST
ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಂದಟ್ಟು ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘ ಕೊಡ ಮಾಡಿದ ಕಲಿಕೋಪಕರಣ ಈಚೆಗೆ ಶಾಲೆಯಲ್ಲಿ ವಿತರಿಸಲಾಯಿತು
ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಂದಟ್ಟು ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘ ಕೊಡ ಮಾಡಿದ ಕಲಿಕೋಪಕರಣ ಈಚೆಗೆ ಶಾಲೆಯಲ್ಲಿ ವಿತರಿಸಲಾಯಿತು   

ಕೋಟ(ಬ್ರಹ್ಮಾವರ): ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಂದಟ್ಟು ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘ ಕೊಡ ಮಾಡಿದ ಕಲಿಕೋಪಕರಣ ಈಚೆಗೆ ಶಾಲೆಯಲ್ಲಿ ವಿತರಿಸಲಾಯಿತು.

ಇದೇ ಸಂದರ್ಭ ನಿವೃತ್ತ ಮುಖ್ಯ ಶಿಕ್ಷಕಿ ಕಮಲಾ ಮಯ್ಯ ಅವರು ನೀಡಿರುವ ಐಡಿ ಕಾರ್ಡ್, ಹೊಸದಾಗಿ ಸೇರಿರುವ ವಿದ್ಯಾರ್ಥಿಗಳಿಗೆ ವಕೀಲ ಮಹೇಶ ಹಂದಟ್ಟು ನೀಡಿರುವ ಬ್ಯಾಗ್, ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಉಪೇಂದ್ರ ಸೋಮಯಾಜಿ ಚಿತ್ರಪಾಡಿ ನೀಡಿದ ₹1 ಸಾವಿರ ಮೊತ್ತದ ನಿರಖು ಠೇವಣಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶಾಂತ ಭಟ್ ಪಾಂಡೇಶ್ವರ, ಸಂಸ್ಥೆಯ ಕಾನೂನು ಸಲಹೆಗಾರ ಮಂಜುನಾಥ ಎಸ್.ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ ಕೆ. ನಾಯಕ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್‌, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸವಿತಾ, ವಾಹನ ಸಮಿತಿಯ ಅಧ್ಯಕ್ಷ ಉಪೇಂದ್ರ ಸೋಮಯಾಜಿ ಚಿತ್ರಪಾಡಿ, ಎಸ್‌ಡಿಎಂಸಿ ಅಧ್ಯಕ್ಷೆ ಮಹಾಲಕ್ಷ್ಮಿ ಸೋಮಯಾಜಿ, ಕಮಲಾ ಮಯ್ಯ ಇದ್ದರು.

ADVERTISEMENT

ವಿದ್ಯಾರ್ಥಿ ಅನುಜ್ಞಾ ಕಾರ್ಯಕ್ರಮ ನಿರ್ವಹಿಸಿದರು. ಉನ್ನತಿ ವಿಹಂದಟ್ಟು ಸ್ವಾಗತಿಸಿದರು. ಸಾನ್ವಿ ವಂದಿಸಿದರು. ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.