ADVERTISEMENT

ವರದಕ್ಷಿಣೆ ಕಿರುಕುಳ: 3 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:25 IST
Last Updated 18 ಡಿಸೆಂಬರ್ 2018, 12:25 IST

ಉಡುಪಿ: ಪತ್ನಿಗೆ ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ರವಿ ರೋಷನ್ ನಜ್ರೀತ್‌ ಎಂಬುವರಿಗೆ ಉಡುಪಿ 3ನೇ ಹೆಚ್ಚುವರಿ ಸಿಜೆ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಶಿಕ್ಷೆ ವಿಧಿಸಿದೆ.

ಆರೋಪಿ ರವಿ ರೋಶನ್ ನಜ್ರಿತ್‌ ಅವರು 2013ರಲ್ಲಿ ಅನಿತ ಜುಸ್ತಿನ್ ಮೆಂಡೋನ್ಸಾ ಅವರನ್ನು ಶಿರ್ವದ ಚರ್ಚ್‍ನಲ್ಲಿ ಮದುವೆಯಾಗಿದ್ದರು. ಮದುವೆಗೂ ಮುನ್ನವೇ ವರದಕ್ಷಿಣೆ ರೂಪದಲ್ಲಿ 20 ಪವನ್ ಚಿನ್ನ ಪಡೆದಿದ್ದರು. ವಿವಾಹವಾದ ಬಳಿಕ ತವರುಮನೆಯಿಂದ ₹ 3 ಲಕ್ಷ ತರುವಂತೆ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಆರಂಭಿಸಿದರು.

ಇದರಿಂದ ಬೇಸತ್ತ ಅನಿತಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಗಳು ಸಾಬೀತಾಗಿದ್ದರಿಂದ ವಿವಿಧ ಕಲಂಗಳಡಿ ಮೂರು ವರ್ಷ ಶಿಕ್ಷೆ ಹಾಗೂ ₹ 10 ಸಾವಿರ ತಂಡ ವಿಧಿಸಿದೆ.

ADVERTISEMENT

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕೆ.ಜಯಂತಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.