ADVERTISEMENT

ಬಿಸ್ಕೆಟ್‌ ಲಾರಿಯಲ್ಲಿ ಬೆಂಕಿ: ನಷ್ಟ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 16:03 IST
Last Updated 12 ಸೆಪ್ಟೆಂಬರ್ 2019, 16:03 IST
ಕುಂದಾಪುರ ತಾಲ್ಲೂಕಿನ ದೂಪದಕಟ್ಟೆ ಬಳಿ ಗುರುವಾರ ಬಿಸ್ಕೆಟ್‌ ಹಾಗೂ ರಸ್ಕ್‌ ತುಂಬಿಕೊಂಡು ಸಾಗುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಸರಕು ನಷ್ಟವಾಗಿದೆ.
ಕುಂದಾಪುರ ತಾಲ್ಲೂಕಿನ ದೂಪದಕಟ್ಟೆ ಬಳಿ ಗುರುವಾರ ಬಿಸ್ಕೆಟ್‌ ಹಾಗೂ ರಸ್ಕ್‌ ತುಂಬಿಕೊಂಡು ಸಾಗುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಸರಕು ನಷ್ಟವಾಗಿದೆ.   

ಕುಂದಾಪುರ: ತಾಲ್ಲೂಕಿನ ದೂಪದಕಟ್ಟೆ ಬಳಿ ಗುರುವಾರ ಬಿಸ್ಕೆಟ್‌ ಹಾಗೂ ರಸ್ಕ್‌ ತುಂಬಿಕೊಂಡು ಸಾಗುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಸರಕು ನಷ್ಟವಾಗಿದೆ.

ವಾಹನದೊಳಗೆ ಸಂಭವಿಸಿದ ಶಾರ್ಟ್‌ ಸರ್ಕ್ಯೂಟ್‌ನಿಂದ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಗಮನಕ್ಕೆ ಬರುತ್ತಿದ್ದಂತೆ ಚಾಲಕ ಹಾಗೂ ಸಿಬ್ಬಂದಿ ವಾಹನವನ್ನು ನಿಲ್ಲಸಿ ಇಳಿದಿದ್ದಾರೆ. ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಲಾರಿ ಕುಂದಾಪುರದಿಂದ ಸಿದ್ದಾಪುರ ಮಾರ್ಗವಾಗಿ ತೆರಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT