ADVERTISEMENT

ರುಡ್‌ಸೆಟ್‌ನಿಂದ ಉಚಿತ ಇಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:15 IST
Last Updated 3 ಜುಲೈ 2022, 2:15 IST
ಬೈಂದೂರು ತಾಲ್ಲೂಕಿನ ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆಯ ಜಿಎಸ್‌ಬಿ ಸಮಾಜದವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ವೆಂಕಟರಮಣ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವ ನಡೆಯಿತು
ಬೈಂದೂರು ತಾಲ್ಲೂಕಿನ ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆಯ ಜಿಎಸ್‌ಬಿ ಸಮಾಜದವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ವೆಂಕಟರಮಣ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವ ನಡೆಯಿತು   

ಬ್ರಹ್ಮಾವರ: ತಾಲ್ಲೂಕಿನ ರುಡ್‌ಸೆಟ್ ಸಂಸ್ಥೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಪಂಚಾಯಿತಿಯ ವತಿಯಿಂದ ನಡೆಯುವ ಇಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಉಡುಪಿ, ಶಿವಮೊಗ್ಗ,
ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಸಂಸ್ಥೆಯಲ್ಲಿ ಜುಲೈ 18 ರಿಂದ ಆಗಸ್ಟ್‌ 16ರವರೆಗೆ ತರಬೇತಿ ನಡೆಯಲಿದೆ. ತರಬೇತಿ ಪಡೆಯಲು ಬಯಸುವರು ಗ್ರಾಮೀಣ ಭಾಗದವರಾಗಿದ್ದು 18 ರಿಂದ 45 ವರ್ಷದ ಒಳಗಿನವರಾಗಿರಬೇಕು. ಬಿಪಿಎಲ್ ಕಾರ್ಡ್ ಹೊಂದಿರಬೇಕು. ಆಸಕ್ತರು ಹೆಸರು, ವಿಳಾಸ, ಮೊಬೈಲ್ (ವಾಟ್ಸ್‌ಆ್ಯಪ್‌ ನಂಬರ್), ಪಡೆಯಲು ಇಚ್ಛಿಸುವ ತರಬೇತಿಗೆ ಅರ್ಜಿ ಬರೆದು
ರೇಷನ್ ಕಾರ್ಡ್‌, ಆಧಾರ ಕಾರ್ಡ್‌ ಸಹಿತ ನಿರ್ದೇಶಕರು, ರುಡ್‌ಸೆಟ್
ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ- 575213, ಉಡುಪಿ ಜಿಲ್ಲೆ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ: 9591233748.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT