ಬೈಂದೂರು: ಗೋವುಗಳು ಸಂತೋಷವಾಗಿದ್ದರೆ ಎಲ್ಲಾ ದೇವರು ಸಂತೋಷವಾಗಿರುತ್ತಾರೆ. ಆ ಮೂಲಕ ಜಗತ್ತು ನಲಿವಿನಿಂದಿರುತ್ತದೆ. ದುರ್ಬಲ ಗೋವುಗಳನ್ನು ರಕ್ಷಿಸುವುದು ಪುಣ್ಯದ ಕೆಲಸವಾಗಿದ್ದು, ಗೋರಕ್ಷಣೆ ಎಲ್ಲರ ಕರ್ತವ್ಯ ಎಂದು ಹೃದಯ ವಿದ್ಯಾ ಫೌಂಡೇಷನ್ ಅಧ್ಯಕ್ಷ ಗುರು ವಿದ್ಯಾಸಾಗರ್ ಹೇಳಿದರು.
ಶನಿವಾರ ಬೈಂದೂರು ತಗ್ಗರ್ಸೆ ಗ್ರಾಮದ ಮೈಕಳದಲ್ಲಿ ಅಶಕ್ತ ಗೋವುಗಳ ಪಾಲನಾ ಕೇಂದ್ರ ‘ಗಂಟಿಧಾಮ’ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಪ್ರದಾಯ, ಪರಂಪರೆಗೆ ನಮ್ಮ ಗ್ರಾಮಗಳು ಆಧಾರವಾಗಿದ್ದು, ಗ್ರಾಮಕ್ಕೆ ಕೃಷಿ ಆಧಾರ. ಕೃಷಿಗೆ ಆಧಾರವಾಗಿರುವ ರೈತರಿಗೆ ಗೋವುಗಳೇ ಆಧಾರ. ಗೋವು ಪೂಜನೀಯ ಮಾತ್ರವಲ್ಲದೆ ನಿತ್ಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.
ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ತಿಮ್ಮಣ್ಣ ಹೆಗಡೆ ಹಾಲಂಬೇರು, ಸಮೃದ್ಧ ಬೈಂದೂರು ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಪಶು ವೈದ್ಯ ಡಾ.ನಾಗರಾಜ್ ಇದ್ದರು. ಭಾಗೀರಥಿ ಪ್ರಾರ್ಥಿಸಿದರು. ಗೋಪಾಲ ಪೂಜಾರಿ ವಸ್ರೆ ಸ್ವಾಗತಿಸಿದರು. ಗಜಾನನ ಮೈಕಳ ವಂದಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.