ADVERTISEMENT

ಹಿಜಾಬ್ ವಿವಾದ: ಶಾಸಕ ರಘುಪತಿ ಭಟ್‌ಗೆ ಬೆದರಿಕೆ ಕರೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 8:39 IST
Last Updated 12 ಫೆಬ್ರುವರಿ 2022, 8:39 IST
ಶಾಸಕ ರಘುಪತಿ ಭಟ್
ಶಾಸಕ ರಘುಪತಿ ಭಟ್   

ಉಡುಪಿ: ಹಿಜಾಬ್ ವಿವಾದ ಸಂಬಂಧ ಇಂಟರ್‌‌ನೆಟ್‌ನಲ್ಲಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.

ಯಾವುದೇ ವ್ಯಕ್ತಿ ಅಥವಾ ನಿರ್ದಿಷ್ಟ ಸಂಘಟನೆಗಳಿಂದ ಬೆದರಿಕೆ ಕರೆ ಬಂದಿಲ್ಲ. ಹೈದರಾಬಾದ್‌ನಿಂದ ಇಂಟರ್‌ನೆಟ್ ಕರೆ ಮಾಡಿದ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆ. ಸ್ಥಳೀಯವಾಗಿ ಎರಡು ಕರೆಗಳು ಬಂದಿವೆ. ಈ ಸಂಬಂಧ ಗೃಹ ಸಚಿವರಿಗೆ ಮೌಖಿಕವಾಗಿ ತಿಳಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರೆ ಮಾಡಿ ಭದ್ರತೆ ಒದಗಿಸುವುದಾಗಿ ತಿಳಿಸಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

'ನನಗೆ ಬೆದರಿಕೆ ಕರೆಗಳು ಹೊಸದಲ್ಲ,ಅವುಗಳಿಗೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಬೆದರಿಕೆ ಕರೆಗಳ ಸಂಬಂಧಭದ್ರತೆಯ ಅವಶ್ಯಕತೆ ಇಲ್ಲ, ದೇವರು ಹಾಗೂ ಉಡುಪಿ ಕ್ಷೇತ್ರದ ಜನರು ನನಗೆ ಭದ್ರತೆ ನೀಡುತ್ತಾರೆ ಎಂದು ರಘುಪತಿ ಭಟ್ ಹೇಳಿದರು.

ADVERTISEMENT

ಹಿಜಾಬ್ ವಿಚಾರದಲ್ಲಿ ನಾನು ತೆಗೆದುಕೊಂಡಿರುವ ನಿಲುವಿಗೆ ಉಡುಪಿಯ ಮುಸಲ್ಮಾನರಿಂದ ಪ್ರತಿರೋಧ ಬಂದಿಲ್ಲ. ಬಹುತೇಕರು ನಿರ್ಧಾರವನ್ನು ಬೆಂಬಲಿಸಿದ್ದಾರೆ. ರಾಜಕೀಯವಾಗಿ ವಿರೋಧಿಸುವವರು ಮಾತ್ರ ಟೀಕಿಸುತ್ತಿದ್ದಾರೆ‌. ಅಂತರ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹಿಜಾಬ್ ವಿವಾದವನ್ನು ನಕಾರಾತ್ಮಕವಾಗಿ ಬಿಂಬಿಸುತ್ತಿದ್ದು ಸಮಸ್ಯೆ ಸೃಷ್ಟಿಯಾಗಿದೆ ಎಂದು ರಘುಪತಿ ಭಟ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.