ADVERTISEMENT

ಉಡುಪಿ: ರಸ್ತೆಗೆ ಉರುಳಿದ ಬೃಹತ್‌ ಟ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 13:54 IST
Last Updated 5 ಜೂನ್ 2025, 13:54 IST
ರಸ್ತೆಗೆ ಉರುಳಿದ ಬೃಹತ್‌ ಟ್ಯಾಂಕ್‌   
ರಸ್ತೆಗೆ ಉರುಳಿದ ಬೃಹತ್‌ ಟ್ಯಾಂಕ್‌      

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮುಲ್ಕಿ ಜಂಕ್ಷನ್‌ ಸಮೀಪ ಟ್ರಕ್‌ನಿಂದ ಬೃಹತ್‌ ಟ್ಯಾಂಕೊಂದು ಗುರುವಾರ ರಸ್ತೆಗೆ ಉರುಳಿದೆ.

ಟ್ಯಾಂಕ್‌ ರಸ್ತೆಗೆ ಉರುಳಿದ ಪರಿಣಾಮವಾಗಿ ಕೆಲಕಾಲ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.

ಹೆದ್ದಾರಿ ಪಕ್ಕದಲ್ಲಿ ಸೂಚನಾ ಫಲಕ ಇದ್ದುದರಿಂದ ಟ್ರಕ್‌ಗೆ ಮುಂದೆ ಸಾಗಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಟ್ರಕ್‌ ಎರಡು ದಿನಗಳಿಂದ ಅಲ್ಲೇ ನಿಂತಿತ್ತು. ಟ್ರಕ್‌ ಅನ್ನು ಹಿಂದಕ್ಕೆ ತೆಗೆದು ಬೇರೆ ರಸ್ತೆಯಲ್ಲಿ ತೆರಳಲು ಯತ್ನಿಸುತ್ತಿದ್ದಾಗ ಟ್ಯಾಂಕ್‌ ರಸ್ತೆಗೆ ಉರುಳಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.