
ಕುಂದಾಪುರ: ಇಲ್ಲಿನ ವಡೇರಹೋಬಳಿಯ ರಾಯಪ್ಪನ ಮಠದ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ ಈಚೆಗೆ ನಡೆಯಿತು. ರಾಯಪ್ಪನ ಮಠದ ದಿ.ಮಾದಪ್ಪ ಹೊಳ್ಳ ಅವರ ಪುತ್ರ ಶ್ರೀಕಾಂತ್ ಹೊಳ್ಳ ಪುಸ್ತಕ ರಚನೆ ಮಾಡಿರುವ ಪುಸ್ತಕವನ್ನು ಪ್ರೊ.ಮುರುಗೇಶಿ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಡಾ.ಸ್ಫೂರ್ತಿ ಹೊಳ್ಳ ರಚಿಸಿದ ರಾಯಪ್ಪನ ಮಠದ ಶ್ರೀ ಚನ್ನಕೇಶವ ದೇವರ ಅಕ್ರಿಲಿಕ್ ಪೇಂಟಿಂಗ್ ನಾರಾಯಣ ಯಾಜಿ ಅನಾವರಣ ಮಾಡಿದರು. ಕೆರೆಕಟ್ಟೆ ಶೇಷಬನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಸಾದ್ ಐತಾಳ ಅಧ್ಯಕ್ಷತೆ ವಹಿಸಿದ್ದರು. ಸೆಲ್ಕೋ ಸೋಲಾರ್ ಕಂಪೆನಿಯ ಸಿಇಓ ಮೋಹನ್ ಹೆಗ್ಡೆ ಇದ್ದರು.
ಶ್ರೀಕಾಂತ್ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕಾರ್ತಿಕ್ ಐತಾಳ ಪ್ರಾರ್ಥಿಸಿದರು, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ರಾಯಪ್ಪನ ಮಠ ನಿರೂಪಿಸಿದರು, ಡಾ.ಸ್ಫೂರ್ತಿ ಹೊಳ್ಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.