ADVERTISEMENT

ಗೋವಂಶದ ಉಳಿವಿಗೆ ಕಾಲ್ನಡಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:50 IST
Last Updated 28 ಅಕ್ಟೋಬರ್ 2022, 7:50 IST
ಮಟ್ಟಾರು ವಿಶ್ವಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ನೇತೃತ್ವದಲ್ಲಿ ಗೋವಂಶದ ಉಳಿವಿಗಾಗಿ ಕಾಲ್ನಡಿಗೆ ಜಾಥಾ ನಡೆಯಿತು.
ಮಟ್ಟಾರು ವಿಶ್ವಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ನೇತೃತ್ವದಲ್ಲಿ ಗೋವಂಶದ ಉಳಿವಿಗಾಗಿ ಕಾಲ್ನಡಿಗೆ ಜಾಥಾ ನಡೆಯಿತು.   

ಶಿರ್ವ: ಮಟ್ಟಾರು ವಿಶ್ವಹಿಂದೂ ಪರಿಷತ್‌, ಭಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋವಂಶ ಉಳಿವಿಗಾಗಿ ಜನಜಾಗೃತಿ ಮೂಡಿಸಲು ‘ಪುಣ್ಯಕೋಟಿ ಉಳಿಸಿ’ ಕಾಲ್ನಡಿಗೆ ಜಾಥಾ ಮಟ್ಟಾರು ಯುಬಿಎಂಸಿ ಶಾಲೆ ಬಳಿಯಿಂದ ಮಟ್ಟಾರು ಮೈದಾನದವರೆಗೆ ನಡೆಯಿತು. ವೇದಮೂರ್ತಿ ಮಾಣಿಬೆಟ್ಟು ವಿಷ್ಣುಮೂರ್ತಿ ಉಪಾಧ್ಯಾಯರ ನೇತೃತ್ವದಲ್ಲಿ ಸಾರ್ವಜನಿಕ ಗೋಪೂಜೆ, ವಾಹನ ಪೂಜೆ ನಡೆಯಿತು.

ಶಂಕರಪುರ ದ್ವಾರಕಾಮಯಿ ಸಾಯಿಬಾಬಾ ಮಂದಿರದ ಸಾಯಿ ಈಶ್ವರ್ ಗುರೂಜಿ ಆಶೀರ್ವಚನ ನೀಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಎ. ಸುವರ್ಣ, ವಿಶ್ವಹಿಂದು ಪರಿಷತ್ ಕಾಪು ಪ್ರಖಂಡದ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು, ಶಿರ್ವ ವಲಯ ಕಾರ್ಯದರ್ಶಿ ಪ್ರಕಾಶ್ ಕೊಟ್ಯಾನ್, ಮಟ್ಟಾರು ಘಟಕ ಗೋರಕ್ಷಾ ಪ್ರಮುಖ್ ಶಿವರಾಜ್ ಆಚಾರ್ಯ, ದುರ್ಗಾವಾಹಿನಿ ಸಂಚಾಲಕಿ ದೀಕ್ಷಾ ಪ್ರಭು, ಶಿರ್ವ ಗ್ರಾ,ಪಂ.ಮಾಜಿ ಅಧ್ಯಕ್ಷೆ ವಾರೀಜಾ ಪೂಜಾರಿ, ಇದ್ದರು.

ವಿವಿಧ ಸ್ಫರ್ಧಾ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ರಂಜಿತ್ ಶೆಟ್ಟಿ ನಿರೂಪಿಸಿದರು. ದ್ವಾರಕಾಮಯಿ ಮಠ ಶಂಕರಪುರ ಇದರ ವತಿಯಿಂದ ಶ್ರೀಸೌಭಾಗ್ಯ ಕಾರ್ಯಕ್ರಮದ ಪ್ರಯುಕ್ತ ಆಯ್ದ 21 ಹೆಣ್ಣುಮಕ್ಕಳಿಗೆ ಚಿನ್ನದ ಮೂಗುತಿ ಧಾರಣೆ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.