ಕಾರ್ಕಳ: ‘ಸಂಸ್ಕೃತವು ವೈಜ್ಞಾನಿಕ ಭಾಷೆಯಾಗಿದ್ದು, ಅದನ್ನು ಅಧ್ಯಯನ ಮಾಡಿದರೆ ನಮ್ಮ ಸಂಸ್ಕೃತಿ ಶ್ರೀಮಂತವಾಗುತ್ತದೆ’ ಎಂದು ಇಲ್ಲಿನ ಎಸ್.ಎಸ್.ವಿ. ಫಂಡ್‌ನ ಅಧ್ಯಕ್ಷ ಎ. ಯೋಗೀಶ ಹೆಗ್ಡೆ ಹೇಳಿದರು.
ಇಲ್ಲಿನ ಭುವನೇಂದ್ರ ಪ್ರೌಢಶಾಲೆಯಲ್ಲಿ ಈಚೆಗೆ ಆಯೋಜಿಸಿದ ವಿಶ್ವ ಸಂಸ್ಕೃತ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೈ. ಮೋಹನ ಶೆಣೈ, ಡಾ.ಕಾರ್ತಿಕ್ ರಾವ್, ಅಜಿತ್ ಕಾಮತ್ ಅವರು ಸಂಸ್ಕೃತ ಭಾಷೆಯ ಮಹತ್ವ ತಿಳಿಸಿದರು. ವೇದಮೂರ್ತಿ ಮುಕುಂದ ಭಟ್ ಸ್ಮರಣಾರ್ಥ ಸಂಸ್ಕೃತ ವಿದ್ಯಾರ್ಥಿವೇತನವನ್ನು ಪ್ರಾಯೋಜಿಸಿದ ರೂಪಾ ವಿನೋದ ಕಣ್ಣನ್ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ಮುಖ್ಯಶಿಕ್ಷಕ ನಾರಾಯಣ ಶೆಣೈ ಸ್ವಾಗತಿಸಿದರು. ಶಿಕ್ಷಕ ಸಂಜಯ್ ಕುಮಾರ್ ವಂದಿಸಿದರು. ಸಂಸ್ಕೃತ ಶಿಕ್ಷಕಿ ಪೂರ್ಣಿಮಾ ಪ್ರಭು ನಿರೂಪಿಸಿದರು. ಇಂದಿರಾ ಪೈ ವಿದ್ಯಾರ್ಥಿ ವೇತನದ ವಿವರ ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.