ಮರಳು ಅಕ್ರಮ ಸಾಗಾಟ
ಕಾರ್ಕಳ: ತಾಲ್ಲೂಕಿನ 2 ಕಡೆ ಪ್ರತ್ಯೇಕ ಅಕ್ರಮ ಮರಳು ಸಾಗಾಟದ ಪ್ರಕರಣ ದಾಖಲಾಗಿದೆ.
ದುರ್ಗಾ ಗ್ರಾಮದ ಮಾಂಜ ಎಂಬಲ್ಲಿ ಸರ್ಕಾರಿ ತೋಡಿನಿಂದ ಮರಳನ್ನು ಕಳವು ಮಾಡಿ ಟಾಟಾ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಚಾಲಕ ಸಯ್ಯದ್ ಜಲೀಲ್ ಎಂಬಾತನನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಪ್ರಕಾಶ್ ಕುಮಾರ್ ಎನ್. ಅವರು ಬಂಧಿಸಿ ಅರ್ಧ ಯುನಿಟ್ ಮರಳು, ಹಾರೆ, ಬುಟ್ಟಿ ವಶಕ್ಕೆ ಪಡೆದಿದ್ದಾರೆ.
ಇನ್ನೊಂದೆಡೆ ಚಿಲಿಂಬಿ ಕಡೆಯಿಂದ ಪರಪ್ಪಾಡಿಯತ್ತ ಮಂಗಳೂರಿನ ಅಡೂರಿನಿಂದ ಎರಡೂವರೆ ಯುನಿಟ್ ಮರಳನ್ನು ಕಳವು ಮಾಡಿ ಟಿಪ್ಪರ್‌ನಲ್ಲಿ ಸಾಗಾಟ ಮಾಡುತ್ತಿದ್ದ ಶೇಖ್ ಶಾಹಿದ್ ಎಂಬಾತನನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ರಘು ಅವರು ಬಂಧಿಸಿ ಟಿಪ್ಪರ್ ಸಹಿತ ಮರಳನ್ನು ವಶಕ್ಕೆ ಪಡೆದಿದ್ದಾರೆ. ಎರಡೂ ಪ್ರಕರಣಗಳು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.