ಕಾರ್ಕಳ: ನಿಟ್ಟೆ ಎನ್ಎಂಎಎಂ ತಾಂತ್ರಿಕ ಕಾಲೇಜಿನ 6ನೇ ಸೆಮೆಸ್ಟರ್ ಬಿ–ಟೆಕ್ ವಿದ್ಯಾರ್ಥಿಗಳು ಆಯ್ಕೆ ಮಾಡಿದ್ದ ‘ಯಕ್ಷಗಾನದ ಪರಿಚಯ’ ಎಂಬ 3 ಕ್ರೆಡಿಟ್ ಐಚ್ಛಿಕ ಕೋರ್ಸ್‌ನ ಸೆಮೆಸ್ಟರ್ ಮೌಲ್ಯಮಾಪನದ ಭಾಗವಾಗಿ ಕಾಲೇಜಿನಲ್ಲಿ ಈಚೆಗೆ ‘ಏಕಾದಶಿ ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಿತು.
ರಾಷ್ಟ್ರೀಯ ಶಿಕ್ಷಣ ನೀತಿಯ ಮಾರ್ಗಸೂಚಿಗಳ ಪ್ರಕಾರ ‘ಯಕ್ಷಗಾನದ ಪರಿಚಯ’ ಎಂಬ ವಿಷಯವನ್ನು 3 ವರ್ಷಗಳ ಹಿಂದೆ ಬಿಇ ಸ್ವಾಯತ್ತ ಯೋಜನೆಯಡಿ ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಪರಿಚಯಿಸಲಾಗಿತ್ತು.
ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಯಕ್ಷಗಾನ ಕಲಾವಿದ ಜನಾರ್ದನ ನಾಯಕ್ ಅವರು, ಸೆಮೆಸ್ಟರ್‌ನಲ್ಲಿ ವಿದ್ಯಾರ್ಥಿಗಳಿಗೆ 40 ಗಂಟೆಗಳ ಕಾಲ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. ಈ ಕೋರ್ಸ್‌ನ ಭಾಗವಾಗಿ ಯಕ್ಷಗಾನ, ತಾಳ, ನಾಟ್ಯ, ವೇಷ, ಸಂವಾದ ಇತ್ಯಾದಿಗಳ ಮೂಲಭೂತ ವಿಷಯಗಳನ್ನು ಕಲಿಸಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಸೆಮೆಸ್ಟರ್‌ನಲ್ಲಿ ಒಟ್ಟು 37 ವಿದ್ಯಾರ್ಥಿಗಳಿಗೆ ನೋಂದಾಯಿಸಲು ಅವಕಾಶ ನೀಡಲಾಗಿತ್ತು. ಸಂಸ್ಥೆಯು ಮೌಲ್ಯಮಾಪನಕ್ಕೆ ಅಗತ್ಯ ಬೆಂಬಲ ಒದಗಿಸುತ್ತದೆ. ಇಂತಹ ಕೋರ್ಸ್ ನೀಡುವ ಏಕೈಕ ಎಂಜಿನಿಯರಿಂಗ್ ಸಂಸ್ಥೆ ಇದಾಗಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.