ಬಂಧನ
ಕಾರ್ಕಳ: ತಾಲ್ಲೂಕಿನ ಸಾಣೂರು ಗ್ರಾಮದ ಪರ್ಪಲೆ ಕೇಮಾರು ಎಂಬಲ್ಲಿ ಮೇ 2ರಂದು ತಮಿಳುನಾಡಿಗೆ ಹೊರಟಿದ್ದ ಮೀನು ತುಂಬಿದ್ದ ಲಾರಿಗೆ ಮುಸುಕು ಧರಿಸಿ ಕಲ್ಲೆಸೆದು ಗಾಜಿಗೆ ಹಾನಿಗೈದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಲಾರಿಯ ಮಣಿಕಂಡನ್ ಎಂಬುವರು ನಗರ ಪೊಲೀಸ್ ಠಾಣೆಯಲ್ಲಿ ಲಾರಿಯ ಗ್ಲಾಸ್ ಒಡೆದು ₹15 ಸಾವಿರ ನಷ್ಟವುಂಟಾಗಿದೆ ಎಂದು ಪ್ರಕರಣ ದಾಖಲಿಸಿದ್ದರು. ಪ್ರಕರಣದ ಆರೋಪಿ ದುರ್ಗಾಪ್ರಸಾದ್ ಯಾನೆ ಪ್ರಸಾದ್ ಎಂಬಾತನನ್ನು ಮೇ 7ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.
ಉಳಿದ ಆರೋಪಿಗಳಾದ ಮೂಡಬಿದಿರೆ ಬೆಳುವಾಯಿಯ ಪ್ರಮೋದ್, ಬಂಟ್ವಾಳ ಅರಳದ ಶಿವರಾಜ್ ಯಾನೆ ಶಿವ ಎಂಬುವರನ್ನು 10ರಂದು ಮೂಡುಬಿದಿರೆ ತಾಲ್ಲೂಕಿನ ಅಲಂಗಾರು ಎಂಬಲ್ಲಿ ಬಂಧಿಸಿ ವಿಚಾರಣೆ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.