ADVERTISEMENT

ಉಡುಪಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶತಾಯುಷಿ ಗುರುವ ಕೊರಗ ನಿಧನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 9:34 IST
Last Updated 22 ಆಗಸ್ಟ್ 2021, 9:34 IST
ಹಿರಿಯ ಕಲಾವಿದ ಶತಾಯುಷಿ ಗುರುವ ಕೊರಗ
ಹಿರಿಯ ಕಲಾವಿದ ಶತಾಯುಷಿ ಗುರುವ ಕೊರಗ   

ಉಡುಪಿ: ಬುಡಕಟ್ಟು ಕೊರಗ ಸಮುದಾಯದ ಹಿರಿಯ ಕಲಾವಿದ ಶತಾಯುಷಿ ಗುರುವ ಕೊರಗ (105) ಭಾನುವಾರ ಹಿರಿಯಡ್ಕದ ಗುಡ್ಡೆಯಂಗಡಿಯ ಬಲ್ಕೋಡಿಯಲ್ಲಿ ನಿಧನರಾದರು.

ಮೃತರಿಗೆ ಮೂವರು ಪುತ್ರಿಯರು ಇದ್ದಾರೆ. ಸ್ವತಃ ಡೋಲು ಸಿದ್ಧಪಡಿಸುವಕಲೆಯನ್ನು ಕರಗತಮಾಡಿಕೊಂಡಿದ್ದಗುರುವಕೊರಗರುಡೋಲುಬಾರಿಸುವಲ್ಲಿ ನಿಷ್ಣಾತರಾಗಿದ್ದರು. ತುಳುನಾಡಿನ ಜಾನಪದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಕಲಾವಿದರಲ್ಲಿ ಒಬ್ಬರು. 12ನೇ ವಯಸ್ಸಿಗೆ ಡೋಲು ಬಾರಿಸಿದ ಗುರುವರು ಜಾತ್ರೆ, ಉತ್ಸವ, ಕಂಬಳ, ಕೋಲ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡೋಲು ಬಾರಿಸುತ್ತಿದ್ದರು.

ಶತಾಯುಷಿಯಾಗಿದ್ದರೂ ಡೋಲು ಬಾರಿಸುವ ಉತ್ಸಾಹ ಕುಂದಿರಲಿಲ್ಲ. ಗುರುವ ಕೊರಗರ ಸಾಧನೆಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.