
ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠವು ಆಯೋಜಿಸಿರುವ ಒಂದು ತಿಂಗಳ ಬೃಹತ್ ಗೀತೋತ್ಸವಕ್ಕೆ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕೃಷ್ಣಮಠದ ರಾಜಾಂಗಣದಲ್ಲಿ ಭಗವದ್ಗೀತೆ ಗ್ರಂಥವನ್ನು ರಥದಲ್ಲಿರಿಸುವ ಮೂಲಕ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಅವರವರು ಅವರವರ ಕರ್ತವ್ಯ ನಿಭಾಯಿಸದಿರುವುದು ಜಗತ್ತು ಹಿಂದೆ ಉಳಿಯಲು ಕಾರಣ. ನಿತ್ಯ ಬದುಕಿನಲ್ಲಿ ಕೃಷ್ಣೋಪದೇಶ ಅಳವಡಿಸಿಕೊಂಡರೆ ಒಳಿತಾಗುತ್ತದೆ’ ಎಂದರು.
‘ಭಗವದ್ಗೀತೆಯು ಮತಿ ಉಳ್ಳವರಿಗೆ ಬೇಕಾದ ಗ್ರಂಥವಾಗಿರುವುದರಿಂದ ಅದು ಮತೀಯ ಗ್ರಂಥ. ಮತಿವಂತರು ಅದನ್ನು ಸ್ವೀಕರಿಸಬೇಕು’ ಎಂದು ಹೇಳಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಬೃಹತ್ ಗೀತೋತ್ಸವದ ಅಂಗವಾಗಿ ಇದೇ 28ರಂದು ಲಕ್ಷ ಕಂಠ ಗೀತಾ ಪಾರಾಯಣ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.