ಕುಂದಾಪುರ: ತಾಲ್ಲೂಕಿನ ವಕ್ವಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಫ್ರೆಂಡ್ಸ್ ವಕ್ವಾಡಿ ಆಶ್ರಯದಲ್ಲಿ ನಡೆಯುತ್ತಿರುವ ಮಕ್ಕಳ 2ನೇ ವರ್ಷದ ಉಚಿತ ಬೇಸಿಗೆ ಶಿಬಿರದ ಉದ್ಘಾಟನೆ ನಡೆಯಿತು.
ಫ್ರೆಂಡ್ಸ್ ವಕ್ವಾಡಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರವೀರ್ ಶೆಟ್ಟಿ ಸಣ್‌ಗಲ್ ಮನೆ, ಸದಾಶಿವ ರಾವ್ ಅರೆಹೊಳೆ, ಉದಯ ಕುಮಾರ್ ಶೆಟ್ಟಿ ಪಟೇಲರಮನೆ, ವಕ್ವಾಡಿ ಫ್ರೆಂಡ್ಸ್ ಮಹಿಳಾ ಮಂಡಲದ ಅಧ್ಯಕ್ಷೆ ನಾಗರತ್ನ ಪಾಲ್ಗೊಂಡಿದ್ದರು.
5 ದಿನ ನಡೆಯುವ ಶಿಬಿರದಲ್ಲಿ ನೃತ್ಯ, ಸಂಗೀತ, ಚಿತ್ರಕಲೆ, ಕಸೂತಿ, ಪಾರಂಪರಿಕ ಮನೆಗಳ ಭೇಟಿ, ವಾಟರ್ ಪಾರ್ಕ್ ಭೇಟಿ ಸಹಿತ ಜ್ಞಾಪಕ ಶಕ್ತಿ ಹೆಚ್ಚಿಸುವ ಕಾರ್ಯಕ್ರಮಗಳು ನಡೆಯಲಿವೆ.
ಶಿಬಿರದ ನಿರ್ದೇಶಕ ಗಿರೀಶ್ ಆಚಾರ್, ಶಿಕ್ಷಕಿಯರಾದ ಸಹನಾ, ಸುಶೀಲಾ ನಿರೂಪಿಸಿದರು. ಜ್ಯೋತಿ ಸ್ವಾಗತಿಸಿದರು, ಹರೀಶ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.