ADVERTISEMENT

ಹೆಬ್ರಿ:ಬಲ್ಲಾಡಿ ಮಠ; ಲಕ್ಷ ತುಳಸಿ ಅರ್ಚನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:15 IST
Last Updated 14 ಆಗಸ್ಟ್ 2025, 6:15 IST
ಬಲ್ಲಾಡಿ ಮಠದ ವಿಠ್ಠಲ ದೇವರಿಗೆ ಲಕ್ಷ ತುಳಸಿ ಅರ್ಚನೆ ನಡೆಯಿತು
ಬಲ್ಲಾಡಿ ಮಠದ ವಿಠ್ಠಲ ದೇವರಿಗೆ ಲಕ್ಷ ತುಳಸಿ ಅರ್ಚನೆ ನಡೆಯಿತು   

ಹೆಬ್ರಿ: ‘ನಾವು ಪ್ರತಿದಿನ ಭಗವಂತನ ಚಿಂತನೆ ಮಾಡಬೇಕು. ದೇವರ ಸೇವೆಯಲ್ಲಿ ಪಾಲ್ಗೊಳ್ಳುವುದು ಸೌಭಾಗ್ಯ. ವಾಯುದೇವರ ಮಹಿಮೆ ಅಪಾರವಾದುದು. ರಾಮನ ಬಗ್ಗೆ ಇದ್ದ ಅಪಾರ ಗೌರವ, ನಂಬಿಕೆಯೇ ಹನುಮಂತನು ಆತನ ಸೇವೆಯಲ್ಲಿ ತೊಡಗಿಕೊಳ್ಳಲು ಕಾರಣವಾಯಿತು’ ಎಂದು ವಿದ್ವಾನ್ ಕಾರ್ಕಳ ಮದ್ವೇಶ ಆಚಾರ್ಯ ಹೇಳಿದರು.

ಅವರು ಮುದ್ರಾಡಿ ಗ್ರಾಮದ ಬಲ್ಲಾಡಿ ಮಠದ ವಿಠ್ಠಲ ದೇವರಿಗೆ ಲಕ್ಷ ತುಳಸಿ ಅರ್ಚನೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ವಿದ್ವಾನ್ ಗಿಲ್ಲಾಳಿ ಪದ್ಮನಾಭ ಆಚಾರ್ಯ ನೇತೃತ್ವದಲ್ಲಿ ಊರ, ಪರವೂರ ವಿಪ್ರ ಬಾಂಧವರ ಸಹಕಾರದಿಂದ ತುಳಸಿ ಅರ್ಚನೆ ಸಂಪನ್ನಗೊಂಡಿತು. ಅರ್ಚಕ ನಾರಾಯಣ ಭಟ್ ಸ್ವಾಗತಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.