ADVERTISEMENT

ಮದಗ ಸಂರಕ್ಷಣೆ: ಕಾಡೂರು ಮಾದರಿ

ಮದಗಗಳು ಪರಿಸರಕ್ಕೆ ಪೂರಕ: ಪಿಯುಷ್‌

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 5:42 IST
Last Updated 15 ಜೂನ್ 2022, 5:42 IST
ಕೇಂದ್ರದ ರಕ್ಷಣಾ ಸಚಿವಾಲಯದ ನಿರ್ದೇಶಕ ಹಾಗೂ ಜಲಶಕ್ತಿ ಕೇಂದ್ರ ಅಭಿಯಾನದ ನೋಡೆಲ್ ಅಧಿಕಾರಿ ಪಿಯುಷ್ ರಂಜನ್ ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದ ಕ್ಷೇತ್ರ ಭೇಟಿ ನಡೆಸಿದರು
ಕೇಂದ್ರದ ರಕ್ಷಣಾ ಸಚಿವಾಲಯದ ನಿರ್ದೇಶಕ ಹಾಗೂ ಜಲಶಕ್ತಿ ಕೇಂದ್ರ ಅಭಿಯಾನದ ನೋಡೆಲ್ ಅಧಿಕಾರಿ ಪಿಯುಷ್ ರಂಜನ್ ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದ ಕ್ಷೇತ್ರ ಭೇಟಿ ನಡೆಸಿದರು   

ಬ್ರಹ್ಮಾವರ: ಮದಗಗಳ ಪುನರುಜ್ಜೀವನ ಮಾಡುವ ಮೂಲಕ ಜಲಶಕ್ತಿ ಅಭಿಯಾನದಡಿ ಕಾಡೂರು ಗ್ರಾಮ ಪಂಚಾಯಿತಿಯಲ್ಲಿ ಅನುಷ್ಠಾನ ಮಾಡಲಾಗಿರುವ ಕಾರ್ಯಚಟುವಟಿಕೆಗಳು ಮಾದರಿಯಾಗಿದ್ದು ಕರಾವಳಿ ಪರಿಸರಕ್ಕೆ ಪೂರಕವಾಗಿದೆ ಎಂದು ಕೇಂದ್ರದ ರಕ್ಷಣಾ ಸಚಿವಾಲಯದ ನಿರ್ದೇಶಕ ಹಾಗೂ ಜಲಶಕ್ತಿ ಕೇಂದ್ರ ಅಭಿಯಾನದ ನೋಡೆಲ್ ಅಧಿಕಾರಿ ಪಿಯುಷ್ ರಂಜನ್ ತಿಳಿಸಿದರು.

ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿಕಾಡೂರು ಗ್ರಾಮ ಪಂಚಾಯಿತಿಗೆ ಆಗಮಿಸಿದ್ದ ಅವರು ಸಾಮಾಜಿಕ ಪರಿಶೋಧನಾ ಸಭೆಗೆ ಭೇಟಿ ನೀಡಿ ಮಾತನಾಡಿದರು.

ಕೇಂದ್ರೀಯ ತಾಂತ್ರಿಕ ಅಧಿಕಾರಿ ಲಕ್ಷ್ಮೀನಾರಾಯಣ ತಾಕುರಾಳ್ ಮಾತನಾಡಿ ‘ನಾಗರಿಕರು ಈ ಭಾಗದಲ್ಲಿ ಮದಗ ಹೂಳೆತ್ತುವ ಕೆಲಸ ನಿರ್ವಹಿಸುತ್ತಿರುವುದು ಜಲಶಕ್ತಿ ಅಭಿಯಾನಕ್ಕೆ ದೊಡ್ಡ ಕೊಡುಗೆ ನೀಡಿದಂತಾಗಿದೆ. ಪಂಚಾಯಿತಿಯಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.

ADVERTISEMENT

ಕಾಡೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹೇಶ್ ಕೆ ಮಾತನಾಡಿದರು.

ಈ ಸಂದರ್ಭ ಕಾಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಉಪಾಧ್ಯಕ್ಷೆ ಅಮಿತಾ ರಾಜೇಶ್, ಸದಸ್ಯರಾದ ಸತೀಶ ಕುಲಾಲ, ಗಿರಿಜಾ, ಜಲಂಧರ್, ನೋಡಲ್‌ ಅಧಿಕಾರಿ ಸುರೇಶ ಬಂಗೇರ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಾಬು, ಸಹಾಯಕ ಯೋಜನಾಧಿಕಾರಿ ಜೇಮ್ಸ್, ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ್, ಸಾಮಾಜಿಕ ಪರಿಶೋಧನಾಧಿಕಾರಿ ಹುಸೇನ್, ಶ್ರೀವಾಣಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ ಶೆಟ್ಟಿ, ಸಾಮಾಜಿಕ ಪರಿಶೋಧನೆಯ ಸಂಪನ್ಮೂಲ ವ್ಯಕ್ತಿಗಳು, ಇಲಾಖಾಧಿಕಾರಿಗಳು ಇದ್ದರು.

ಉಡುಪಿ ನೆಹರೂ ಯುವಕೇಂದ್ರದ ಅಧಿಕಾರಿ ವಿಲ್‌ಫ್ರೆಡ್ ಡಿಸೋಜಾ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.