ADVERTISEMENT

ಉಡುಪಿ ಕೃಷ್ಣನಿಗೆ ಮಹಾಭಿಷೇಕ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 13:32 IST
Last Updated 30 ಜೂನ್ 2020, 13:32 IST
ಶ್ರೀಕೃಷ್ಣ ಮಠದಲ್ಲಿ ಮಂಗಳವಾರ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕಡೆಗೋಲು ಕೃಷ್ಣನಿಗೆ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ವಿಶೇಷ ಪಂಚಾಮೃತ ಅಭಿಷೇಕ ಮಾಡಿದರು.
ಶ್ರೀಕೃಷ್ಣ ಮಠದಲ್ಲಿ ಮಂಗಳವಾರ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕಡೆಗೋಲು ಕೃಷ್ಣನಿಗೆ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ವಿಶೇಷ ಪಂಚಾಮೃತ ಅಭಿಷೇಕ ಮಾಡಿದರು.   

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮಂಗಳವಾರ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕಡೆಗೋಲು ಕೃಷ್ಣನಿಗೆ 1,108 ಸೀಯಾಳಗಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಅಭಿಷೇಕ ಮಾಡಲಾಯಿತು.

ವೇದ ಮಂತ್ರ ಘೋಷದೊಂದಿಗೆ ಕೃಷ್ಣನಿಗೆ ಅಷ್ಠಮಠದ ಯತಿಗಳು ಪಂಚದ್ರವ್ಯಗಳಿಂದ ಅಭಿಷೇಕ ನೆರವೇರಿಸಿದರು. ಪ್ರತಿವರ್ಷ ಭಕ್ತರ ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ಉತ್ಸವದಲ್ಲಿ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಮಠದ ಬೆರಳೆಣಿಕೆ ಸಿಬ್ಬಂದಿ ಮಾತ್ರ ಭಾಗವಹಿಸಿದ್ದರು.

ಪರ್ಯಾಯ ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ, ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ‌ಮಠದ ಕಿರಿಯ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.