ADVERTISEMENT

ನಿರ್ವಹಣೆ: ಮಲ್ಪೆಯ ತೇಲುವ ಸೇತುವೆ ತೆರವು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 16:10 IST
Last Updated 27 ಮಾರ್ಚ್ 2023, 16:10 IST
ಮಲ್ಪೆ ಬೀಚ್‌ನಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆಯನ್ನು ನಿರ್ವಹಣಾ ಕೆಲಸ ಹಾಗೂ ಭಾರಿ ಮಳೆ ಗಾಳಿಯ ಮುನ್ಸೂಚನೆಯ ಕಾರಣದಿಂದ ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ
ಮಲ್ಪೆ ಬೀಚ್‌ನಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆಯನ್ನು ನಿರ್ವಹಣಾ ಕೆಲಸ ಹಾಗೂ ಭಾರಿ ಮಳೆ ಗಾಳಿಯ ಮುನ್ಸೂಚನೆಯ ಕಾರಣದಿಂದ ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ   

ಉಡುಪಿ: ಮಲ್ಪೆ ಬೀಚ್‌ನಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆಯನ್ನು ನಿರ್ವಹಣಾ ಕೆಲಸ ಹಾಗೂ ಭಾರಿ ಮಳೆ ಗಾಳಿಯ ಮುನ್ಸೂಚನೆಯ ಕಾರಣದಿಂದ ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ ಎಂದು ಮಂತ್ರ ಟೂರಿಸಂ ಸಂಸ್ಥೆ ತಿಳಿಸಿದೆ.

ಸಮುದ್ರದ ನೀರಿನಲ್ಲಿ ತೇಲುವಾಗ ಪ್ಲಾಸ್ಟಿಕ್‌ ಬಾಕ್ಸ್‌ಗಳ ಕೆಳಗಿನ ಭಾಗದಲ್ಲಿ ಚಿಪ್ಪುಗಳು ಜಮೆಯಾಗಿರುತ್ತವೆ. ಅವುಗಳನ್ನು ತೆಗೆಯಲು ಸೇತುವೆಯನ್ನು ತೆರವು ಮಾಡಲಾಗಿದೆ. ಆದರೆ ಕೆಲವರು ಮತ್ತೆ ತೇಲುವ ಸೇತುವೆ ಮುರಿದುಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT