ADVERTISEMENT

ಗಾಂಜಾ ಮಾರಾಟ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 8:23 IST
Last Updated 7 ಸೆಪ್ಟೆಂಬರ್ 2025, 8:23 IST
ಅಚ್ಯುತ
ಅಚ್ಯುತ   

ಉಡುಪಿ: ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಕೆ.ಎಂ.ಪಿ. ರಸ್ತೆಯ ಬೊಬ್ಬರ್ಯ ದೈವಸ್ಥಾನದ ಬಳಿ ಬೈಕ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಉರ್ವದ ಅಚ್ಯುತ ಎನ್‌. ಯಾನೆ ಕಿರಣ್‌ ಮೆಂಡನ್‌ (45), ಉಡುಪಿ ಪಡುತೋನ್ಸೆಯ ಪುನೀತ್ ಯಾನೆ ಪುನೀತ್‌ ರಾಜ್‌ (24), ಒಡಿಶಾದ ಚಂದ್ರಕಾಂತ ಕಟ್ವ ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ಕೊಳಲಗಿರಿಯ ಕಿಶೋರ ಎಂಬಾತ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೈಕ್‌ನ ಕೆಳಭಾಗವನ್ನು ಪರೀಕ್ಷಿಸಿದಾಗ ಗಾಂಜಾ, ಎಂಡಿಎಂಎ ಸೇರಿ ಸಣ್ಣ ಸಣ್ಣ ಪ್ಯಾಕೆಟ್ ಪತ್ತೆಯಾಗಿದೆ. 3‌ ಗ್ರಾಂ 480 ಮಿಲಿ.ಗ್ರಾಂ ತೂಕದ ಗಾಂಜಾ, ಅಂದಾಜು ₹10 ಸಾವಿರ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT
ಪುನೀತ್
ಚಂದ್ರಕಾಂತ್ ಕಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.