ADVERTISEMENT

ಕೈಪುಂಜಾಲ್: ಸಫರ್ ಝಿಯಾರತ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 5:29 IST
Last Updated 22 ಸೆಪ್ಟೆಂಬರ್ 2022, 5:29 IST
ಕಾಪು ಕೈಪುಂಜಾಲು ಸೈಯ್ಯದ್ ಅರಭಿ ವಲಿಯುಲ್ಲಾ ದರ್ಗಾದಲ್ಲಿ ಬುಧವಾರ ಸಫರ್ ಝಿಯಾರತ್ ನಡೆಯಿತು
ಕಾಪು ಕೈಪುಂಜಾಲು ಸೈಯ್ಯದ್ ಅರಭಿ ವಲಿಯುಲ್ಲಾ ದರ್ಗಾದಲ್ಲಿ ಬುಧವಾರ ಸಫರ್ ಝಿಯಾರತ್ ನಡೆಯಿತು   

ಕಾಪು (ಪಡುಬಿದ್ರಿ): ಪೊಲಿಪು ಜಾಮಿಯಾ ಮಸೀದಿಯ ಆಡಳಿತ ಸಮಿತಿಯ ಅಧೀನಕ್ಕೊಳಪಟ್ಟ ಸಯ್ಯದ್ ಅರಭಿ ವಲಿಯುಲ್ಲಾ ದರ್ಗಾದಲ್ಲಿ ಬುಧವಾರ ಸಫರ್ ಝಿಯಾರತ್ ಬುಧವಾರ ನಡೆಯಿತು.

ಕಾಪು ಖಾಝಿ ಅಲ್ ಹಾಜ್ ಪಿ.ಬಿ.ಅಹ್ಮದ್ ಮುಸ್ಲಿಯಾರ್ ರವರು ದುಆ ನೆರವೇರಿಸಿದರು. ಪೊಲಿಪು ಜಾಮಿಯಾ ಮಸೀದಿಯ ಖತೀಬರಾದ ಮುಹಮ್ಮದ್ ಇರ್ಷಾದ್ ಸಅದಿಯವರು ಉದ್ಘಾಟಿ ಸಿದರು.

ಪೊಲಿಪು ಜಾಮಿಯಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಅಬ್ದುಲ್ಲ ಸೂಪರ್ ಸ್ಟಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಜಬ್ ಹಾಜಿ ಮೈದಿನ್, ಸಮಿತಿ ಸದಸ್ಯ ಅಮೀರ್ ಹಂಝ ಇಮ್ತಿಯಾಝ್ ಅಹ್ಮದ್, ಕಾರ್ಯಕ್ರಮದ ಉಸ್ತುವಾರಿ ಸರ್ಫರಾಝ್, ಇಲ್ಯಾಸ್, ಉಪಸ್ಥಿತರಿದ್ದರು.
ಇಸ್ಲಾಮಿಕ್ ಹಿಜರಿಯ ಕ್ಯಾಲೆಂಡರ್ ಪ್ರಕಾರ ಸಫರ್ ತಿಂಗಳ ಕೊನೆಯ ಬುಧವಾರ ಝಿಯಾರತ್ ನಡೆಯುತ್ತದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ವಿವಿಧ ಜಿಲ್ಲೆಗಳಿಂದ ಸುಮಾರು 15ಸಾವಿರದಿಂದ20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು. ಝಿಯಾರತ್‌ಗೆ ಮುಸ್ಲಿಮ್ ಮಾತ್ರವಲ್ಲದೆ ಇತರ ಧರ್ಮೀಯರು ಅಲ್ಲಿ ಸೇರಿದ್ದರು.

ADVERTISEMENT

ಮೊಗವೀರ ಸಮುದಾಯದ ಜಾಗದಲ್ಲಿರುವ ದರ್ಗಾ ಇದು.

ಇಲ್ಲಿ ವರ್ಷಕ್ಕೊಮ್ಮೆ ಮುಸ್ಲಿಮರ ಝಿಯಾರತ್ ಕಾರ್ಯಕ್ರಮ ನಡೆಯುತ್ತದೆ. ಇದು ಹಿಂದೂ ಮುಸ್ಲಿಮ್ ಭಾವೈಕ್ಯತೆಯ ಸಂದೇಶ ನೀಡುವ ಕೇಂದ್ರವಾಗಿದೆ ಎನ್ನುತ್ತಾರೆ ಸಮಿತಿ ಸದಸ್ಯ ಅಮೀರ್.
ಮೊಗವೀರ ಸಮುದಾಯಕ್ಕೆ ನರೇಂದ್ರ ಶ್ರೀಯಾನ್ ಮತ್ತು ಗುಣವಂತ ಶ್ರೀಯಾನ್ ಹಾಗೂ ಕುಟುಂಬದವರ ಜಾಗದಲ್ಲಿ ನೂರಾರು ವರ್ಷಗಳಿಂದಲೂ ಇಲ್ಲಿ ದರ್ಗಾ ಇದೆ. ದರ್ಗಾದ ಸುತ್ತಲೂ ವಾಸಿಸುವವರು ಮೊಗವೀರರು. ನಿತ್ಯ ದರ್ಗಾ ವಠಾರವನ್ನು ಮೊಗ ವೀರ ಸಮುದಾಯದವರೇ ಸ್ವಚ್ಛ ಗೊಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.