ADVERTISEMENT

ಪಾನ್ ಕಾರ್ಡ್ ಅಪ್‌ಡೇಟ್‌ ಹೆಸರಿನಲ್ಲಿ ₹1 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 16:24 IST
Last Updated 6 ಮಾರ್ಚ್ 2023, 16:24 IST
   

ಉಡುಪಿ: ಪಾನ್‌ಕಾರ್ಡ್‌ ಅಪ್‌ಡೇಟ್‌ ನೆಪದಲ್ಲಿ ವ್ಯಕ್ತಿಯೊಬ್ಬರ ಖಾತೆಯಿಂದ ವಂಚಕರು ಆನ್‌ಲೈನ್‌ ಮೂಲಕ ₹ 1 ಲಕ್ಷ ದೋಚಿದ್ದಾರೆ

ಕುಂದಾಪುರದ ಸುಧಾಕರ ಕಾಂಚನ್ ವಂಚನೆಗೊಳಗಾದವರು. ಈಚೆಗೆ ಸುಧಾಕರ್ ಅವರ ಮೊಬೈಲ್‌ಗೆ ಪಾನ್ ಕಾರ್ಡ್‌ ಅಪ್‌ಡೇಟ್ ಮಾಡುವಂತೆ ಸಂದೇಶ ಬಂದಿದೆ. ಇದನ್ನು ನಂಬಿ ಲಿಂಕ್‌ ಕ್ಲಿಕ್ ಮಾಡಿ ವಿವರವನ್ನು ನಮೂದಿಸಿದ್ದಾರೆ. ಬಳಿಕ ಸುಧಾಕರ್ ಖಾತೆಯಿಂದ 1 ಲಕ್ಷ ಕಡಿತವಾಗಿದೆ.

ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.