ADVERTISEMENT

ಅಲೆಗಳ ಸೆಳೆತಕ್ಕೆ ಕೊಚ್ಚಿಹೋದ ದೋಣಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:54 IST
Last Updated 3 ಜುಲೈ 2022, 1:54 IST
ಮಲ್ಪೆ ಧಕ್ಕೆಯಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಮೀನುಗಾರಿಕಾ ದೋಣಿ ಅಲೆಗಳ ಸೆಳೆತಕ್ಕೆ ಸಿಲುಕಿ ಪಲ್ಟಿಯಾಗಿ ಕೈಪುಂಜಾಲು ಕಡಲ ಕಿನಾರೆಯ ದಡಕ್ಕೆ ಬಂದು ಬಿದ್ದಿದೆ.
ಮಲ್ಪೆ ಧಕ್ಕೆಯಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಮೀನುಗಾರಿಕಾ ದೋಣಿ ಅಲೆಗಳ ಸೆಳೆತಕ್ಕೆ ಸಿಲುಕಿ ಪಲ್ಟಿಯಾಗಿ ಕೈಪುಂಜಾಲು ಕಡಲ ಕಿನಾರೆಯ ದಡಕ್ಕೆ ಬಂದು ಬಿದ್ದಿದೆ.   

ಕಾಪು (ಪಡುಬಿದ್ರಿ): ಮಲ್ಪೆ ಧಕ್ಕೆಯಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಮೀನುಗಾರಿಕಾ ದೋಣಿ ಅಲೆಗಳ ಸೆಳೆತಕ್ಕೆ ಸಿಲುಕಿ ಪಲ್ಟಿಯಾಗಿ ದೋಣಿಯ ಅವಶೇಷಗಳು ಕೈಪುಂಜಾಲು ಕಡಲ ಕಿನಾರೆಯ ದಡಕ್ಕೆ ಬಂದು ಬಿದ್ದಿದೆ.

ಮೀನುಗಾರಿಕಾ ದೋಣಿ ಸಹಿತ ಅದರೊಳಗಿದ್ದ ಬಲೆ, ಎಂಜಿನ್ ಸಹಿತ ಎಲ್ಲ ವಸ್ತುಗಳು ಸಮುದ್ರದ ಪಾಲಾಗಿವೆ. ದೋಣಿಯ ಭಾಗಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕೈಪುಂಜಾಲು ಕೆಂಪುಗುಡ್ಡೆಯಲ್ಲಿ ಹರಡಿಕೊಂಡಿವೆ.

ಮಲ್ಪೆಯ ರಾಕೇಶ್ ಮತ್ತು ಯಶವಂತ್ ಎಂಬವರಿಗೆ ಮೀನುಗಾರಿಕಾ ದೋಣಿ ಸೇರಿದ್ದು, ₹ 15 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.