ADVERTISEMENT

ದೇವಳ ಜೀರ್ಣೋದ್ಧಾರ: ಶಿಲಾಸೇವೆ ನಿವೇದನೆ ಪತ್ರ ಬಿಡುಗಡೆ

₹30 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿದೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 13:54 IST
Last Updated 23 ಜೂನ್ 2025, 13:54 IST
ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಶಿಲಾಸೇವೆಯ ನಿವೇದನೆ ಪತ್ರವನ್ನು ಶಶಿಕಲಾ ಬಿಡುಗಡೆಗೊಳಿಸಿದರು
ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಶಿಲಾಸೇವೆಯ ನಿವೇದನೆ ಪತ್ರವನ್ನು ಶಶಿಕಲಾ ಬಿಡುಗಡೆಗೊಳಿಸಿದರು   

ಪಡುಬಿದ್ರಿ: ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಶಿಲಾಸೇವೆ ನಿವೇದನೆ ಪತ್ರವನ್ನು ಭಾನುವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ವೈ ಬಿಡುಗಡೆಗೊಳಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ ಮಾತನಾಡಿ, ಏಕಾದಶ ರುದ್ರ ಇರುವ ಕಾರಣ 11 ಸಂಖ್ಯೆಗೆ ಮಹತ್ವ ನೀಡಲಾಗಿದೆ. ಭಗವಂತನ ಆಲಯ ನಿರ್ಮಾಣದಲ್ಲಿ ತನು, ಮನ, ಧನಗಳಿಂದ ಸಹಕರಿಸಿ ದೇವಾಲಯದ ಪುನರ್‌ನವೀಕರಣದ ಮಹಾಯಜ್ಞದಲ್ಲಿ ತೊಡಗಿಸಿಕೊಳ್ಳಿ ಎಂದರು.

ಆನುವಂಶಿಕ ಮೊಕ್ತೇಸರ ಪಿ. ಭವಾನಿಶಂಕರ ಹೆಗ್ಡೆ ಮಾತನಾಡಿ, ಜೀರ್ಣೋದ್ಧಾರದ ಎಲ್ಲಾ ಪ್ರಕ್ರಿಯೆಗಳು ಭರದಿಂದ ಸಾಗುತ್ತಿವೆ. ಮುಂಬೈ, ಬೆಂಗಳೂರು, ಚೆನ್ನೈನಲ್ಲಿರುವ ದೇವಳದ ಭಕ್ತರನ್ನು ಸೇರಿಸಿಕೊಂಡು ಜೀರ್ಣೋದ್ಧಾರ ಸಮಿತಿ ರಚಿಸಲು ಶೀಘ್ರ ಅಲ್ಲಿಗೆ ತೆರಳಲಾಗುವುದು ಎಂದರು.

ADVERTISEMENT

ಗ್ರಾಮದ ಪ್ರತಿ ಮನೆಗೂ ಜೀರ್ಣೋದ್ಧಾರ, ಶಿಲಾಸೇವೆಯ ಮಾಹಿತಿ ನೀಡುವ ಸಲುವಾಗಿ ಗ್ರಾ.ಪಂ. ಸದಸ್ಯರನ್ನು ಒಳಗೊಂಡು ಸಮಿತಿಯೊಂದಿಗೆ ಮನೆ ಭೇಟಿ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ ಹೆಗ್ಡೆ, ಅರ್ಚಕ ವೈ. ಗುರುರಾಜ ಭಟ್, ಸಮಿತಿ ಪ್ರಮುಖರಾದ ವೈ. ಸುಕುಮಾರ್, ನವೀನಚಂದ್ರ ಜೆ. ಶೆಟ್ಟಿ, ಪಿ.ಕೆ. ಸದಾನಂದ, ಭಾಸ್ಕರ ಪಡುಬಿದ್ರಿ, ಪ್ರಕಾಶ್ ದೇವಾಡಿಗ ಭಾಗವಹಿಸಿದ್ದರು. ರಾಮಚಂದ್ರ ಆಚಾರ್ಯ ನಿರೂಪಿಸಿದರು.

ಶಿಲಾಸೇವೆ ಸಮರ್ಪಣೆಗೆ ಅವಕಾಶ

ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರವೀಂದ್ರನಾಥ ಜಿ. ಹೆಗ್ಡೆ ಮಾತನಾಡಿ ₹30 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಜೀಣೋದ್ಧಾರಗೊಳ್ಳುತ್ತಿರುವ ಜೀರ್ಣೋದ್ಧಾರದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವ ಸಲುವಾಗಿ ಶಿಲಾಸೇವೆ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಏಕಶಿಲೆಯಿಂದ ಆರಂಭಿಸಿ ಸಹಸ್ರ ಶಿಲೆವರೆಗೂ ಸೇವೆ ನೀಡಬಹುದು. ಶಿಲಾ ಸೇವೆಯೊಂದಕ್ಕೆ ₹1111 ಎರಡು ಶಿಲೆಗಳಿಗೆ ₹2211 ಐದು ಶಿಲೆಗಳಿಗೆ ₹5511 ಹತ್ತು ಶಿಲೆಗಳಿಗೆ ₹11111 ನೂರು ಶಿಲೆಗಳಿಗೆ ₹111111 ಸಾವಿರ ಶಿಲೆಗಳಿಗೆ ₹1111111 ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.