ಉಡುಪಿ: ಸಿದ್ದೇಶ್ವರ ಸ್ವಾಮೀಜಿ ಅವರ ನಿಧನ ತಿಳಿದು ವಿಷಾದವಾಗಿದೆ. ವೈಕುಂಠ ಏಕಾದಶಿಯ ಪರ್ವದಿನದ ಅಗಲಿಕೆ ಅವರ ಜೀವನ ಸಾರ್ಥಕ್ಯಕ್ಕೆ ಕನ್ನಡಿಯಂತಿದೆ.
ಸರಳತೆಗೆ ಪರ್ಯಾಯ ಎಂಬಂತಿದ್ದ ಸಿದ್ದೇಶ್ವರ ಸ್ವಾಮೀಜಿ ಆಡಂಬರದ ಸ್ಪರ್ಶವಿಲ್ಲದೆ ವಿರಕ್ತ ಜೀವನ ನಡೆಸುವವರಿಗೆ ಮಾದರಿಯಾಗಿದ್ದರು. ಸೇವಾ ಕಾರ್ಯ ಹಾಗೂ ಮಾರ್ಗದರ್ಶನದ ಮೂಲಕ ಅಸಂಖ್ಯ ಜನರ ದುಃಖ ದುಮ್ಮಾನಗಳಿಗೆ ಸಾಂತ್ವನ ಸಮಾಧಾನ ನೀಡುತ್ತ ದಾರಿ ಬೆಳಕಾಗಿದ್ದರು. ಋಷಿ ಪರಂಪರೆಯ ಅಮೂಲ್ಯ ಕೊಂಡಿ ಕಳಚಿರುವುದಕ್ಕೆ ತೀವ್ರ ವಿಷಾದವಾಗಿದೆ. ಸಿದ್ಧೇಶ್ವರ ಸ್ವಾಮೀಜಿ ಅವರ ಆತ್ಮಕ್ಕೆ ಶ್ರೀಕೃಷ್ಣನು ಸದ್ಗತಿ ಕರುಣಿಸಲಿ
– ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪೇಜಾವರ ಮಠ ಉಡುಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.