ADVERTISEMENT

ಉಡುಪಿ: ಪ್ರಧಾನಿ ಮೋದಿ ಪೇಜಾವರ ಸ್ವಾಮೀಜಿ ಭೇಟಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 14:51 IST
Last Updated 8 ನವೆಂಬರ್ 2021, 14:51 IST
ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಿದ್ದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಮಾಡಿ ಉಡುಪಿಯ ಕಲಾವಿದೆ ವಸಂತಲಕ್ಷ್ಮೀ ಹೆಬ್ಬಾರ್ ರಚಿಸಿದ ಮೋದಿ ಅವರ ತೈಲಚಿತ್ರ ಹಾಗೂ ಸಂಸ್ಕೃತ, ಕನ್ನಡ, ತುಳು ಲಿಪಿಯಲ್ಲಿದ್ದ ಸ್ಮರಣಿಕೆ ನೀಡಿದರು.
ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಿದ್ದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಮಾಡಿ ಉಡುಪಿಯ ಕಲಾವಿದೆ ವಸಂತಲಕ್ಷ್ಮೀ ಹೆಬ್ಬಾರ್ ರಚಿಸಿದ ಮೋದಿ ಅವರ ತೈಲಚಿತ್ರ ಹಾಗೂ ಸಂಸ್ಕೃತ, ಕನ್ನಡ, ತುಳು ಲಿಪಿಯಲ್ಲಿದ್ದ ಸ್ಮರಣಿಕೆ ನೀಡಿದರು.   

ಉಡುಪಿ: ಕೀರ್ತಿಶೇಷ ವಿಶ್ವೇಶತೀರ್ಥ ಶ್ರೀಗಳಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಘೋಷಿಸಿದ್ದ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಿದ್ದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಮಾಡಿದರು.

ಶ್ರೀಗಳೊಂದಿಗೆ ಕುಶಲೋಪರಿ ನಡೆಸಿದ ಪ್ರಧಾನಿ ಹಿರಿಯ ಯತಿಗ ವಿಶ್ವೇಶ ತೀರ್ಥರನ್ನು ಸ್ಮರಿಸಿದರು. ಮೋದಿ ಅವರಿಗೆ ಯಕ್ಷಗಾನದ ಕೇದಗೆ ಮುಂಡಾಸಿನ ಕಿರೀಟ ತೊಡಿಸಿ, ಜರತಾರಿ ಶಾಲು ಹೊದಿಸಿ, ಉಡುಪಿ ಕೃಷ್ಣನ ಗಂಧ, ನಿರ್ಮಾಲ್ಯ ತುಳಸಿಯನ್ನು ಪೇಜಾವರ ಶ್ರೀಗಳು ನೀಡಿದರು.

ಉಡುಪಿಯ ಕಲಾವಿದೆ ವಸಂತಲಕ್ಷ್ಮೀ ಹೆಬ್ಬಾರ್ ರಚಿಸಿದ ಮೋದಿ ಅವರ ತೈಲಚಿತ್ರ ಹಾಗೂ ಸಂಸ್ಕೃತ, ಕನ್ನಡ, ತುಳು ಲಿಪಿಯಲ್ಲಿದ್ದ ಸ್ಮರಣಿಕೆ ನೀಡಲಾಯಿತು. ಬಳಿಕ ಉಡುಪಿಯ ಕೃಷ್ಣಮಠಕ್ಕೆ ಆಗಮಿಸುವಂತೆ ಶ್ರೀಗಳು ನೀಡಿದ ಆಹ್ವಾನಕ್ಕೆ ಮೋದಿ ಒಪ್ಪಿಗೆ ಸೂಚಿಸಿದರು ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

ADVERTISEMENT

ಭೇಟಿ ವೇಳೆ, ದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ, ಹಿಂದೂ ಶ್ರದ್ಧಾ ಕೇಂದ್ರಗಳನ್ನು ಸರ್ಕಾರಿ ವ್ಯವಸ್ಥೆಯಿಂದ ಸ್ವಾಯತ್ತಗೊಳಿಸುವುದು, ಮಹರ್ಷಿ ವೇದವ್ಯಾಸರ ಜಯಂತಿಯನ್ನು ತತ್ವಜ್ಞಾನ ದಿನ ಅಥವಾ ಅಧ್ಯಾತ್ಮ ದಿನವಾಗಿ ಘೋಷಿಸಿ ಸರ್ಕಾರದಿಂದ ಆಚರಿಸುವುದು, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಮನವಿಯನ್ನು ಶ್ರೀಗಳು ಪ್ರಧಾನಿಗೆ ಸಲ್ಲಿಸಿದರು.

ಈ ಸಂದರ್ಭ ಪೇಜಾವರ ಮಠದ ದಿವಾನರಾದ ಎಂ.ರಘುರಾಮಾಚಾರ್ಯ, ಡಿ.ಪಿ.ಅನಂತ್, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.