ಹೆಬ್ರಿ: ಇಲ್ಲಿನ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ವತಿಯಿಂದ ಪರಿಸರ ದಿನಾಚರಣೆ ಹಾಗೂ ಗಿಡ ವಿತರಣೆ ಗುರುವಾರ ನಡೆಯಿತು.
ಸಂಘದ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಿಡ ನೆಡುವುದಷ್ಟೇ ಅಲ್ಲ, ಅದರ ಪಾಲನೆ ಪೋಷಣೆ ಮಾಡಬೇಕು. ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ರಾಜೆಶ್ರೀ, ಕಾರ್ಯದರ್ಶಿ ನಳಿನಿ, ಆಡಳಿತ ಮಂಡಳಿ ಸದಸ್ಯರಾದ ವಿನೋದ, ಕೆ. ಗಣೇಶ್, ಕಲಾವತಿ, ಸದಸ್ಯರಾದ ದಿನೇಶ್, ಜಗನ್ನಾಥ್ ನಾಯ್ಕ್, ಅಕ್ಕಯ್ಯ, ಚೈತನ್ಯ, ಅರಿವ್, ವನಜ, ಉದಯ, ವಾಣಿಶ್ರೀ, ಮೇಘಶ್ರೀ, ಸನ್ನಿಧಿ, ಸಮರ್ಥ, ಕೃತಿಕಾ, ರಿಷಿಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.