ADVERTISEMENT

ಚಿತ್ರೀಕರಣಕ್ಕೆ ಪೊಲೀಸರ ಅಡ್ಡಿ: ತಳ್ಳಾಟ

ಪೊಲೀಸರ ವಿರುದ್ಧ ಪತ್ರಕರ್ತರ ಆಕ್ರೋಶ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಮೇ 2019, 14:47 IST
Last Updated 1 ಮೇ 2019, 14:47 IST

ಉಡುಪಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಕಾಪುವಿನ ಮೂಳೂರಿನಲ್ಲಿರುವ ಸಾಯಿರಾಧಾ ರೆಸಾರ್ಟ್‌ ಬಳಿ ಬುಧವಾರ ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಮುಖ್ಯಮಂತ್ರಿಗಳ ಸೂಚನೆಯಿದ್ದು, ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಯಾರೂ ಚಿತ್ರೀಕರಣ ಮಾಡುವಂತಿಲ್ಲ. ರೆಸಾರ್ಟ್‌ ಬಳಿ ನಿಲ್ಲುವಂತಿಲ್ಲ ಎಂದು ಪೊಲೀಸರು ಏರು ಧ್ವನಿಯಲ್ಲಿ ಮಾತನಾಡಿದರು.

ಈ ನಡುವೆ ರೆಸಾರ್ಟ್‌ನ ಚಿತ್ರೀಕರಣಕ್ಕೆ ಮುಂದಾದ ಖಾಸಗಿ ಸುದ್ದಿವಾಹಿನಿಯ ಛಾಯಾಗ್ರಹಕನನ್ನು ಪೊಲೀಸರು ದೂಡಿದರು. ಈ ಸಂದರ್ಭ ಮಾತಿನ ಚಕಮಕಿ ನಡೆಯಿತು. ಜನಸಾಮಾನ್ಯರ ಮೈಮುಟ್ಟುವ ಅಧಿಕಾರ ಪೊಲೀಸರಿಗಿಲ್ಲ ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಎಸ್‌ಐ ಅವಾಚ್ಯಶಬ್ದಗಳಿಂದ ಮಾಧ್ಯಮದವರನ್ನು ನಿಂದಿಸಿದ ಪ್ರಸಂಗವೂ ನಡೆಯಿತು.

ADVERTISEMENT

ಪೊಲೀಸರ ನಡವಳಿಕೆಯನ್ನು ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.