.
ಹೆಬ್ರಿ: ಕಾಂಗ್ರೆಸ್ ಮುಖಂಡ, ಪ್ರಗತಿಪರ ಕೃಷಿಕ ಸೀತಾನದಿ ರಮೇಶ ಹೆಗ್ಡೆ (58) ಬುಧವಾರ ಸಂಜೆ ತಮ್ಮ ಫಾರ್ಮ್ ಹೌಸ್‌ನಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪತ್ನಿ, ಪುತ್ರ ಇದ್ದಾರೆ. ಅಜಾತಶತ್ರು ಆಗಿದ್ದ ರಮೇಶ ಹೆಗ್ಡೆ ಅವರು ಯುವಕರ ಕಣ್ಮಣಿಯಾಗಿದ್ದರು. ಸ್ಥಳೀಯ ನಾಯಕರಾಗಿದ್ದುಕೊಂಡು, ಮುಖ್ಯವಾಹಿನಿಗೆ ಬರದೆ ತೆರೆ ಮರೆಯಲ್ಲೇ ಜನಸೇವೆ ಮಾಡುತ್ತಿದ್ದರು. ತಂದೆ– ತಾಯಿಯೊಂದಿಗೆ ಸೀತಾನದಿಯ ಮನೆಯಲ್ಲೇ ವಾಸವಿದ್ದರು. ಹೊರದೇಶದಿಂದ ಸಹೋದರರು ಬಂದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.