ಕಾರ್ಕಳ: ನಿರಂತರ ಸುರಿದ ಗಾಳಿ ಮಳೆಗೆ ತಾಲ್ಲೂಕಿನ ವಿವಿಧೆಡೆ ಹಾನಿ ಸಂಭವಿಸಿದೆ.
ಮಿಯಾರು ಗ್ರಾಮದ ಬೋರ್ಕಟ್ಟೆ ರಮಣಿ ಅವರ ಕೊಟ್ಟಿಗೆ ಕುಸಿದು ಬಿದ್ದು ಹಾನಿಯಾಗಿದೆ. ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ಸುಲೋಚನಾ ಶೆಟ್ಟಿ ಎಂಬುವರ ಮನೆ ಮೇಲೆ ಮರ ಬಿದ್ದು ಎದುರಿನ ಶೀಟ್ ಹಾನಿಗೊಂಡಿದೆ.
ನಿಟ್ಟೆ ಗ್ರಾಮದ ಹೇನೊಟ್ಟು ಎಂಬಲ್ಲಿ ಲಿಯೊ ಸಲ್ದಾನ ಎಂಬುವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಎರ್ಲಪಾಡಿ ಗ್ರಾಮದ ಕುಂಟಲ್ಪಾಡಿ ಎಂಬಲ್ಲಿ ವಿಲಿಯಂ ಡಿಸೋಜ ಎಂಬುವರ ಮನೆಗೆ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.