ADVERTISEMENT

18ರಂದು ರೆಡ್ ಅಲರ್ಟ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 12:42 IST
Last Updated 16 ಮೇ 2022, 12:42 IST

ಉಡುಪಿ: ಮುಂದಿನ ಮೂರ್ನಾಲ್ಕು ದಿನ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ 17 ಹಾಗೂ 19ರಂದು ಆರೆಂಜ್ ಅಲರ್ಟ್ (65 ಮಿ.ಮೀಗೂ ಹೆಚ್ಚು ಮಳೆ ಸಂಭವ) ಹಾಗೂ ಮೇ 18ರಂದು ರೆಡ್‌ ಅಲರ್ಟ್‌ (205 ಮಿ.ಮೀಗೂ ಹೆಚ್ಚು ಮಳೆ) ಘೋಷಿಸಲಾಗಿದೆ.

ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ವಿಪತ್ತು ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಹಾಗೂ ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ADVERTISEMENT

ಜಿಲ್ಲೆಯಾದ್ಯಂತ ಸೋಮವಾರ ಸಾಧರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.