ADVERTISEMENT

ವಿದ್ಯುತ್ ದರ ಏರಿಕೆ ಶಾಕ್ ಕೊಟ್ಟ ಸರ್ಕಾರ: ರಮೇಶ್ ಕಾಂಚನ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 15:26 IST
Last Updated 24 ಸೆಪ್ಟೆಂಬರ್ 2022, 15:26 IST
ರಮೇಶ್ ಕಾಂಚನ್‌
ರಮೇಶ್ ಕಾಂಚನ್‌   

ಉಡುಪಿ: ನವರಾತ್ರಿ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸುವ ಮೂಲಕ ಕರೆಂಟ್ ಶಾಕ್‌ ಕೊಟ್ಟಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಟೀಕಿಸಿದ್ದಾರೆ.

ದಿನ ನಿತ್ಯ ಬಳಸುವ ವಸ್ತುಗಳ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿ ಗಾಯದ ಮೇಲೆ ಬರೆ ಏಳೆದಿದೆ. ಅ.1ರಿಂದಲೇ ಗ್ರಾಹಕರಿಗೆ ವಿದ್ಯುತ್ ಶುಲ್ಕದ ಹೊರೆ ಬೀಳಲಿದೆ. ಕಳೆದ ಏಪ್ರಿಲ್‍ನಲ್ಲಿ ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳಲ್ಲಿ ದರ ಏರಿಕೆ ಮಾಡಿದ್ದರೂ ಮತ್ತೊಮ್ಮೆ ದರ ಏರಿಸಿರುವುದು ಖೇದಕರ.

ಪ್ರತಿ ಯೂನಿಟ್ ಮೇಲೆ 43 ಪೈಸೆ ದರ ಏರಿಕೆಯಾಗಲಿದ್ದು, ಮುಂದಿನ ವರ್ಷದ ಮಾರ್ಚ್‍ವರೆಗೆ ದರ ಚಾಲ್ತಿಯಲ್ಲಿರಲಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ವಿದ್ಯುತ್ ಉತ್ಪಾದನೆ ಉತ್ತಮವಾಗಿದ್ದರೂ ವಿದ್ಯುತ್ ಖರೀದಿಗೆ ₹1,244 ಕೋಟಿ ಹೆಚ್ಚಳವಾಗಿರುವುದು ಅಚ್ಚರಿಯ ಸಂಗತಿ ಎಂದು ತಿಳಿಸಿದ್ದಾರೆ.

ADVERTISEMENT

ಇಂಧನ ಸಚಿವ ಸುನಿಲ್ ಕುಮಾರ್ ವಿದ್ಯುತ್ ದರ ಏರಿಸುವ ಬದಲು ಜನಪರ ನಿಲುವು ತಾಳಿ ವಿದ್ಯುತ್ ದರ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ರಮೇಶ್ ಕಾಂಚನ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.