ADVERTISEMENT

ಹೆದ್ದಾರಿ ಕಾಮಗಾರಿ: ಅ.1ರಿಂದ ಭಾರಿ ವಾಹನಗಳ ಸಂಚಾರ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 14:21 IST
Last Updated 28 ಸೆಪ್ಟೆಂಬರ್ 2022, 14:21 IST

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ವ್ಯಾಪ್ತಿಯಲ್ಲಿ 76 ಕಿ.ಮೀನಿಂದ 85 ಕಿ.ಮೀವರೆಗೂ ಚತುಷ್ಪಥ ರಸ್ತೆ ಕಾಮಗಾರಿ ಹಾಗೂ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಬಾಕಿ ಇರುವ ಕಾಂಕ್ರೀಟಿಕರಣ ಕಾಮಗಾರಿ ಅ.1ರಿಂದ ಆರಂಭವಾಗುತ್ತಿದ್ದು, ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಅ.1ರಿಂದ ನ.14ರವರೆಗೆ 45 ದಿನ ಕಾಮಗಾರಿ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು ಬದಲಿ ಮಾರ್ಗದಲ್ಲಿ ಸಂಚರಿಸಬೇಕು. ಕುಂದಾಪುರ ಕಡೆಯಿಂದ ಬರುವ ಭಾರಿ ವಾಹನಗಳು ಅಂಬಾಗಿಲು ಪೆರಂಪಳ್ಳಿ–ಮಣಿಪಾಲ ರಸ್ತೆಯ ಮೂಲಕ ಸಂಚರಿಸಬೇಕು. ಉಡುಪಿಯಿಂದ ಬರುವ ವಾಹನಗಳು ಕಲ್ಸಂಕ ಜಂಕ್ಷನ್ ಬಳಿ ಎಡ ತಿರುವು ಪಡೆದು ಗುಂಡಿಬೈಲು ರಸ್ತೆ ಮೂಲಕ ಎ.ವಿ.ಬಾಳಿಗಾ ಆಸ್ಪತ್ರೆ ಬಳಿಯಿಂದ ಪೆರಂಪಳ್ಳಿ ರಸ್ತೆಯ ಮೂಲಕ ಮಣಿಪಾಲಕ್ಕೆ ಹೋಗಬೇಕು.

ಕಾರ್ಕಳ ಹಿರಿಯಡ್ಕದಿಂದ ಬರುವ ವಾಹನಗಳು ಮಣಿಪಾಲ–ಪೆರಂಪಳ್ಳಿ–ಅಂಬಾಗಿಲು ರಸ್ತೆಯ ಮೂಲಕ ಹೋಗಬೇಕು, ಉಡುಪಿಯಿಂದ ಮಣಿಪಾಲಕ್ಕೆ ಬರುವ ದ್ವಿಚಕ್ರ ವಾಹನಗಳು, ಕಾರುಗಳು, ಬಸ್‌ಗಳು ಇಂದ್ರಾಳಿ ಸೇತುವೆ ಮೇಲೆ ಏಕಮುಖ ನಿರ್ಬಂಧಿತ ರೀತಿಯಲ್ಲಿ ಚಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಆದೇಶ ಹೊರಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.