ಕಾರ್ಕಳ: ಇಲ್ಲಿನ ಬಿಎಸ್ಎನ್‌ಎಲ್ ವ್ಯಾಪ್ತಿಯ ಸೂಡ ದೂರವಾಣಿ ಕೇಂದ್ರದಲ್ಲಿ ಟೆಲಿಕಾಂ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ, ಬಳಕೆದಾರರ ಮೆಚ್ಚುಗೆ ಗಳಿಸಿದ್ದ ಶಿವರಾಮ ಸಫಲಿಗ ಅವರನ್ನು ಕಾರ್ಕಳ ದೂರವಾಣಿ ಮನೋರಂಜನಾ ಕೂಟದ ವತಿಯಿಂದ ಬೀಳ್ಕೊಡಲಾಯಿತು.
ಹಾಲಿ ಜೆ.ಟಿ.ಒ. ವಿನೀತ್ ಅವರು ಶಿವರಾಮ ಅವರ ಸೇವಾ ತತ್ವರತೆ, ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಬಿಎಸ್‌ಎನ್‌ಎಲ್ ನೌಕರರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ತನ್ವೀರ್ ಪಾಷಾ ಮಾತನಾಡಿ, ಶಿವರಾಮ ಅವರು ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರ ನಡೆನುಡಿ ಇತರರಿಗೆ ಮಾದರಿ ಎಂದರು.
ಎಜಿಎಂ ಹರಿಕುಮಾರ್, ಗಫೂರ್, ಜಯರಾಮ ಎನ್, ಉಷಾ ಶಶಿಧರ್ ಭಾಗವಹಿಸಿದ್ದರು. ಕೂಟದ ಪರವಾಗಿ ಸಫಲಿಗ ದಂಪತಿಯನ್ನು ಸನ್ಮಾನಿಸಲಾಯಿತು.
ಶಿವರಾಮ ಸಫಲಿಗ ಅವರು ಬಿಎಸ್ಎನ್‌ಲ್ ಸಂಸ್ಥೆಯಲ್ಲಿ ಆರಂಭಿಕ ದಿನಗಳಲ್ಲಿ ಅನುಭವಿಸಿದ ಕಷ್ಟ ನಷ್ಟಗಳನ್ನು ಉಲ್ಲೇಖಿಸಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು
ದೂರವಾಣಿ ಮನೋರಂಜನಾ ಕೂಟದ ಅಧ್ಯಕ್ಷ ಜೆ.ಟಿ.ಒ ಸುದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಗುರುರಾಜ್ ನಿರೂಪಿಸಿದರು. ಸುಧೀರ್ ಶೆಟ್ಟಿ ಸಹಕರಿಸಿದರು. ಕೆ.ಕೆ. ನಂಬಿಯಾರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.