ADVERTISEMENT

ನಟ, ರಂಗಕರ್ಮಿ ಮೇಟಿ ಮುದಿಯಪ್ಪ ನಿಧನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 12:17 IST
Last Updated 18 ಮಾರ್ಚ್ 2022, 12:17 IST
ನಟ, ರಂಗಕರ್ಮಿ ಮೇಟಿ ಮುದಿಯಪ್ಪ
ನಟ, ರಂಗಕರ್ಮಿ ಮೇಟಿ ಮುದಿಯಪ್ಪ    

ಉಡುಪಿ: ನಟ, ರಂಗಕರ್ಮಿ ಮೇಟಿ ಮುದಿಯಪ್ಪ (66) ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದ ಮೇಟಿ ಮುದಿಯಪ್ಪ ಲೇಖಕರಾಗಿ, ಕಲಾ ಸಂಘಟಕರಾಗಿ, ನಟರಾಗಿ ಗುರುತಿಸಿಕೊಂಡಿದ್ದರು. ಹಲವು ಪ್ರಶಸ್ತಿ, ಪುರಸ್ಕಾರ, ಗೌರವಗಳು ಅವರಿಗೆ ಸಂದಿತ್ತು.

ರಂಗಭೂಮಿ ಉಡುಪಿ ಸಂಸ್ಥೆಯಲ್ಲಿ 30 ವರ್ಷಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಪ್ರಸ್ತುತ ಜೊತೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ADVERTISEMENT

ಉಡುಪಿ ರಥಬೀದಿ ಗೆಳೆಯರು, ಯಕ್ಷಗಾನ ಕಲಾರಂಗ, ಲಯನ್ಸ್ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

ಮೇಟಿ ಮುದಿಯಪ್ಪ ಅವರ ಅಂತ್ಯ ಸಂಸ್ಕಾರ ಗಂಗಾವತಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.