ADVERTISEMENT

ನವೀನ್‌‌ಚಂದ್ರ ಶೆಟ್ಟಿ ರಟ್ಟಾಡಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತೆ ದೂರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 8:24 IST
Last Updated 7 ಸೆಪ್ಟೆಂಬರ್ 2025, 8:24 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕುಂದಾಪುರ (ಉಡುಪಿ): ‘ರಟ್ಟಾಡಿ ಗ್ರಾಮದ ಮಣಿಮಕ್ಕಿ ರಟ್ಟೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮುಖ್ಯಸ್ಥ, ಉಡುಪಿ ಜಿಲ್ಲಾ ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ನವೀನ್‌‌ಚಂದ್ರ ಶೆಟ್ಟಿ ರಟ್ಟಾಡಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತೆ (ಸೇವಾ ಪ್ರತಿನಿಧಿ)ಯೊಬ್ಬರು ದೂರು ನೀಡಿದ್ದಾರೆ.

ADVERTISEMENT

ಆರೋಪಿ ವಿರುದ್ಧ ಬಿಎನ್‌ಎಸ್‌ ಕಲಂ 75ರ ಅಡಿ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳದಲ್ಲಿ ಸೆ.5ರಂದು ಹಮ್ಮಿಕೊಂಡಿದ್ದ ಧರ್ಮಸಂರಕ್ಷಣಾ ಸಮಾವೇಶದ ಆಮಂತ್ರಣ ನೀಡಲು ಸೇವಾ ಪ್ರತಿನಿಧಿ ಸೆ.2ರಂದು ಕರೆ ಮಾಡಿದ್ದರು. ತಾನು ಮನೆಯಲ್ಲಿರುವುದಾಗಿ ತಿಳಿಸಿದ್ದ ಆರೋಪಿ, ಮಧ್ಯಾಹ್ನ 1ಗಂಟೆಯ ಒಳಗೆ ಬರುವಂತೆ ತಿಳಿಸಿದ್ದ. 12 ಗಂಟೆಯ ವೇಳೆಗೆ ಮಹಿಳೆ ಆತನ ಮನೆಗೆ ತೆರಳಿದ್ದು, ಜಗುಲಿಯ ಕುರ್ಚಿಯಲ್ಲಿ ಕುಳಿತಿದ್ದಾಗ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಮುಜುಗರಕ್ಕೆ ಒಳಗಾಗಿದ್ದ ಆಕೆ ಅಲ್ಲಿಂದ ಹೊರಡುವ ವೇಳೆ ಎರಡು ನಿಮಿಷ ನಿಲ್ಲುವಂತೆ ಆರೋಪಿ ಒತ್ತಾಯಿಸಿದ್ದ. ಮತ್ತೆ ಅಶ್ಲೀಲವಾಗಿ  ವರ್ತಿಸಿದ್ದು, ಕೆಲಸ ಮುಗಿಸಿ ತನ್ನ ಮನೆಗೆ ಬರುವಂತೆ ಹೇಳಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೌನ ಏಕೆ?: ‘ಈ ಘಟನೆ ಖಂಡನೀಯ.  ಪ್ರಕರಣದ ಕುರಿತು ಶಾಸಕರು, ಬಿಜೆಪಿ ಮೌನ ಮುರಿದು ಜನತೆಗೆ ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು  ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.