ADVERTISEMENT

ಧಾರೇಶ್ವರರಿಗೆ ಉಡುಪ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 5:07 IST
Last Updated 23 ಡಿಸೆಂಬರ್ 2022, 5:07 IST
ಸುಬ್ರಹ್ಮಣ್ಯ ಧಾರೇಶ್ವರ
ಸುಬ್ರಹ್ಮಣ್ಯ ಧಾರೇಶ್ವರ   

ಕೋಟ(ಬ್ರಹ್ಮಾವರ): ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲಿ ಒಬ್ಬರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಕ್ರೀಡಾಪಟು ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಉಡುಪ ಪ್ರಶಸ್ತಿ 2022ಕ್ಕೆ ಈ ಬಾರಿ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಭಾಜನರಾಗಿದ್ದಾರೆ. ಪ್ರಶಸ್ತಿಯು ₹ 10 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

1978ರಿಂದ ನಾಲ್ಕು ದಶಕಗಳಿಗೂ ಮೀರಿ ಅಮೃತೇಶ್ವರಿ, ಪೆರ್ಡೂರು, ಶಿರಸಿ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ ಧಾರೇಶ್ವರರು, ಆಟ ಕೂಟಗಳಲ್ಲಿ ಸಮರ್ಥ ರಂಗ ನಿರ್ದೇಶನ ಮಾಡಿದವರು. ಗುರು ನಾರಣಪ್ಪ ಉಪ್ಪೂರರ ಶಿಷ್ಯರಾಗಿ ಪುರಾಣ ಪ್ರಸಂಗ ಹಾಗೂ ನವೀನ ಪ್ರಸಂಗಗಳಲ್ಲಿ ಯಕ್ಷ ಪರಂಪರೆಯೊಂದಿಗೆ ಸ್ವಂತಿಕೆಯ ಛಾಪು ಮೂಡಿಸಿದವರು. ಧಾರೇಶ್ವರರು ಮೂಲತಃ ಗೋಕರ್ಣದವರು.

ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಟ್ರಸ್ಟ್ ಕಾರ್ಯಾಧ್ಯಕ್ಷ ಮಹೇಶ ಉಡುಪ, ಅಧ್ಯಕ್ಷ ಬಲರಾಮ ಕಲ್ಕೂರ, ಸದಸ್ಯ ಜನಾರ್ದನ ಹಂದೆ ಎಚ್. ರನ್ನು ಒಳಗೊಂಡ ಆಯ್ಕೆ ಸಮಿತಿಯು ಈ ಆಯ್ಕೆ ಮಾಡಿದೆ. ಜನವರಿ 23ರಂದು ಕೋಟದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಕಾರ್ಯದರ್ಶಿ ಎಚ್. ಸುಜಯೀಂದ್ರ ಹಂದೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.