ಕಾರ್ಕಳ: ‘ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಕಳದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಯಕ್ಷ ಶಿಕ್ಷಣವನ್ನು 13 ವರ್ಷದಿಂದ ನೀಡುತ್ತಾ ಬಂದಿದ್ದು, ಇದೀಗ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌ನ ಸಹಯೋಗದಲ್ಲಿ ಕಾರ್ಕಳದ 10 ವಿದ್ಯಾಸಂಸ್ಥೆಗಳಲ್ಲಿ ಯಕ್ಷ ಶಿಕ್ಷಣ ನೀಡಲಾಗುತ್ತಿದೆ’ ಎಂದು ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಹೇಳಿದರು.
ತಾಲ್ಲೂಕಿನ ನಲ್ಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14ನೇ ವರ್ಷದ ಯಕ್ಷಗಾನ ತರಗತಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಲ್ಲೂರಿನ ಉದ್ಯಮಿ ಸತೀಶ್ ಶೆಟ್ಟಿ ತರಗತಿ ಉದ್ಘಾಟಿಸಿದರು. ಕಲಾರಂಗದ ಕೋಶಾಧ್ಯಕ್ಷ ಶ್ರೀವರ್ಮ ಅಜ್ರಿ, ಯಕ್ಷಗುರು ಮಹಾವೀರ ಪಾಂಡಿ, ಉಪಾಧ್ಯಕ್ಷ ಶಿವಸುಬ್ರಹ್ಮಣ್ಯ ಭಟ್, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಸಾದ್ ಇದ್ದರು. ಮುಖ್ಯಶಿಕ್ಷಕ ನಾಗೇಶ್ ಸ್ವಾಗತಿಸಿ, ನಿರೂಪಿಸಿದರು. ಯಕ್ಷನಾಟ್ಯ ಗುರು ಮಹಾವೀರ ಪಾಂಡಿ ಯಕ್ಷಗಾನ ತರಗತಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.