ADVERTISEMENT

ಯಕ್ಷಗಾನ ಕಲಾವಿದರಿಗೆ ಯಕ್ಷ ಟ್ರೋಫಿ ಕ್ರಿಕೆಟ್ ಟೂರ್ನಿ ಇಂದು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 4:30 IST
Last Updated 30 ಮಾರ್ಚ್ 2023, 4:30 IST

ಬ್ರಹ್ಮಾವರ: ಶೈನ್ ಇವೆಂಟ್ಸ್‌ ವತಿಯಿಂದ ಮಾರ್ಚ್‌ 30ರಂದು ಬೆಳಿಗ್ಗೆ 8ಕ್ಕೆ ಅಚ್ಲಾಡಿಯ ಸನ್‌ಶೈನ್ ಕ್ರೀಡಾಂಗಣದಲ್ಲಿ ಬಡಗುತಿಟ್ಟಿನ ಯಕ್ಷಗಾನ ಮೇಳಗಳ ಕಲಾವಿದರಿಗೆ ‘ಯಕ್ಷ ಟ್ರೋಫಿ’ ಕ್ರಿಕೆಟ್‌ ಪಂದ್ಯಾಟ ನಡೆಯಲಿದೆ.

ಮಂದಾರ್ತಿ ಮೇಳ, ಮಾರಣಕಟ್ಟೆ, ಕಮಲಶಿಲೆ, ಅಮೃತೇಶ್ವರಿ, ಮಡಾಮಕ್ಕಿ, ಗೋಳಿಗರಡಿ, ಹಾಲಾಡಿ, ನೀಲಾವರ, ಮೇಗರವಳ್ಳಿ ಮೇಳಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಮೊದಲಬಾರಿಗೆ ಹಮ್ಮಿಕೊಂಡಿರುವ ಕ್ರಿಕೆಟ್‌ ಪಂದ್ಯಾಟ ಐಪಿಎಲ್ ಮಾದರಿಯಲ್ಲಿ ನಡೆಯುತ್ತಿದೆ ಎಂದು ಸುಶಾಂತ್ ಶೆಟ್ಟಿ ಅಚ್ಲಾಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT