ADVERTISEMENT

`ಅಂಗವಿಕಲರ ರಕ್ಷಣೆ ಸಮಾಜದ ಹೊಣೆ'

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 8:59 IST
Last Updated 4 ಡಿಸೆಂಬರ್ 2012, 8:59 IST

ಸಿದ್ದಾಪುರ:  `ಅಂಗವಿಕಲರಿಗೆ ಸರಿಯಾದ ಬದುಕು ಕಲ್ಪಿಸುವ ಜವಾಬ್ದಾರಿ  ಸಮಾಜದ್ದು' ಎಂದು ಸಾಮಾಜಿಕ ಕಾರ್ಯಕರ್ತ ವಿ.ಎಂ. ಭಟ್ಟ ಕೊಳಗಿ ನುಡಿದರು.

ಜೆಡಿಎಸ್‌ನ ಅಂಗವಿಕಲ ವಿಭಾಗದ ಜಿಲ್ಲಾ ಘಟಕದ ಆಶ್ರಯದಲ್ಲಿ ಪಟ್ಟಣದ ನಿರ್ಮಲ ಹೋಟೆಲ್‌ನ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಅಂಗವಿಕಲರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಗವಿಕಲರ ಸಂಖ್ಯೆ ಹೆಚ್ಚಾಗಬೇಕು ಎನ್ನುವುದು ಸರಿಯಲ್ಲ. ಆದರೆ ಅವರ ಸಂಘಟನೆ ಬಲಿಷ್ಠವಾಗುವ ಅಗತ್ಯವಿದೆ. ಎಲ್ಲ ಬೇಧಗಳನ್ನು   ಬಿಟ್ಟು ಅಂಗವಿಕಲರಿಗೆ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್‌ನ  ಅಂಗವಿಕಲ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸುಧಾಕರ ಪಂಡಿತ ಮಾತನಾಡಿ, ಇದ್ದ ಅಂಗವಿಕಲರಿಗೆ ಹೆಚ್ಚಿನ ಸೌಲಭ್ಯ ದೊರೆಯಬೇಕು. ಬರುವ ಚುನಾವಣೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗ ಅಂಗವಿಕಲರಿಗೆ ಹಲವು ರೀತಿಯ ಸೌಲಭ್ಯಗಳು ದೊರೆಯಲಿವೆ ಎಂದರು.

ಜೆಡಿಎಸ್‌ನ ವಿವಿಧ ಪದಾಧಿಕಾರಿಗಳಾದ  ಸತ್ಯನಾರಾಯಣ ಗೌಡ, ಶ್ರೀಪಾದ ದೀಕ್ಷಿತ್, ಸತೀಶ ಹೆಗಡೆ, ಅಂಗವಿಕಲ ವಿಭಾಗದ ನಗರದ ಅಧ್ಯಕ್ಷ ಚೂಡಾಮಣಿ ಉಪಸ್ಥಿತರಿದ್ದರು. ಶ್ರೀಧರ ನಾಯ್ಕ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.