ADVERTISEMENT

ಇಂಧನ ಬೆಲೆ ಇಳಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 9:35 IST
Last Updated 22 ಸೆಪ್ಟೆಂಬರ್ 2011, 9:35 IST

ಸಿದ್ದಾಪುರ: ಕೇಂದ್ರ ಸರ್ಕಾರವು ಇಂಧನದ ಬೆಲೆಯನ್ನು ತಕ್ಷಣ ಇಳಿಕೆ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾದ ಶಿರಸಿ-ಸಿದ್ದಾಪುರ ಕ್ಷೇತ್ರ ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.ಬುಧವಾರ ಈ ಕುರಿತ ಮನವಿಯನ್ನು ಸ್ಥಳೀಯ ತಹಸೀಲ್ದಾರ ಗಣಪತಿ ಕಟ್ಟಿನಕೆರೆ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಸಲ್ಲಿಸಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರವು ಆಗಾಗ ಇಂಧನದ ಬೆಲೆಯನ್ನು ಏರಿಕೆ ಮಾಡಿದೆ. ಇದರಿಂದ ಸರಕು-ಸಾಕಾಣಿಕೆಯ ವೆಚ್ಚ ಹೆಚ್ಚಳವಾಗಿ ಎಲ್ಲ ದೈನಂದಿನ ಅಗತ್ಯ ವಸ್ತುಗಳ ಬೆಲೆಯೂ ಏರಿದೆ. ಬೆಲೆ ಏರಿಕೆಯಿಂದ ಸಾರ್ವಜನಿಕರ ಬದುಕು ದುಸ್ತರವಾಗಿದೆ.

ಆದ್ದರಿಂದ ಇಂಧನದ ಬೆಲೆಯನ್ನು ತಕ್ಷಣ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿಗಳು ನಿರ್ದೇಶನ ನೀಡಬೇಕು ಎಂದು  ಒತ್ತಾಯಿಸಿದ್ದಾರೆ.ಬಿಜೆಪಿ ಯುವ ಮೋರ್ಚಾದ ಕ್ಷೇತ್ರ ಘಟಕದ ಅಧ್ಯಕ್ಷ ಗುರುರಾಜ ಶಾನಭಾಗ, ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಗುರು ರಾಜ ಹೆಗಡೆ, ಯುಮೋರ್ಚಾ ಕ್ಷೇತ್ರ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಇತರ ಪದಾಧಿಕಾರಿ ಗಳಾದ ಮೋಹನ ನಾಯ್ಕ, ಮಾಬ್ಲೇಶ್ವರ ಹೆಗಡೆ, ಉಮೇಶ ಗೌಡ, ದಯಾನಂದ ನಾಯ್ಕ, ಪ್ರಶಾಂತ ನಾಯ್ಕ, ಗಜಾನನ ಶೇಟ್, ಧನಂಜಯ ಮತ್ತು ಷಣ್ಮುಖ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.